ಕಲಬುರಗಿ: ಶಹಾಬಾದ್ ರಸ್ತೆಯಲ್ಲಿನ ಮನೆಯೊಂದರಲ್ಲಿ ೧.೪೮ ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ ಮಾಡಲಾಗಿದೆ. ನಾಗೇಂದ್ರ ಮಂಗನ್ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಜೂ.೨೩ರಂದು ಮಧ್ಯಾಹ್ನ ೧೨.೩೦ಕ್ಕೆ ಮನೆಗೆ ಕೀಲಿ ಹಾಕಿಕೊಂಡು ಹೋಗಿದ್ದಾರೆ. ಮಧ್ಯಾಹ್ನ ೧.೧೫ಕ್ಕೆ ವಾಪಸ್ ಬಂದಾಗ ಬಾಗಿಲು ಮುರಿದಿದ್ದು, ಬೆಡ್ರೂಮಿನಲ್ಲಿದ್ದ ಅಲಮಾರದಲ್ಲಿನ ಬಂಗಾರದ ಉಂಗುರ, ಲಾಕೆಟ್, ಬೋರಮಳ, ಜುಮಕಿ, ಕಿವಿ ಸರಪಳಿ, ಬೆಳ್ಳಿ ಆರತಿ ಸೆಟ್, ಬೆಳ್ಳಿ ಉಂಗುರು, ೧೮ ಸಾವಿರ ರೂ. ನಗದು ಸೇರಿ ಒಟ್ಟು ೧.೪೮ ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಲಾಗಿದೆ ಎಂದು ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.