ಜಿಲ್ಲೆ

ಸರ್ಕಾರಿ ಪ್ರೌಢಶಾಲೆಯಲ್ಲಿ ಕಳ್ಳತನ

ಅವಿನಾಶ್ ಜೈನಹಳ್ಳಿ

ಮೈಸೂರು: ತಾಲೂಕಿನ ಉದ್ಬೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಕೊಠಡಿಯ ಬಾಗಿಲನ್ನು ಮೀಟಿ ಒಳ ನುಗ್ಗಿರುವ ಕಳ್ಳರು, ಬ್ಯಾಟರಿ, ಸೋಲಾರ್, ಕಂಪ್ಯೂಟರ್ ಸೇರಿದಂತೆ 1.35 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದಾರೆ.

ಶನಿವಾರ ಶಾಲೆ ಮುಗಿದ ನಂತರ ಬೀಗ ಹಾಕಿ ಶಿಕ್ಷಕರು ಮನೆಗೆ ತೆರಳಿದ್ದರು. ಸೋಮವಾರ ಶಾಲೆಗೆ ಬಂದ ವೇಳೆ ಕಳ್ಳತನ ನಡೆದಿರುವುದು ಗೊತ್ತಾಗಿದೆ.

ಶಾಲೆಯ ಮೂರು ಕೊಠಡಿಯ ಬಾಗಿಲು ಮೀಟಿ ಒಳ ನುಗ್ಗಿರುವ ಕಳ್ಳರು. ಅಲ್ಲಿದ್ದ 12 ಬ್ಯಾಟರಿ, ಟಿವಿ, ಎರಡು ಕಂಪ್ಯೂಟರ್ ಸೇರಿದಂತೆ ಹಲವು ವಸ್ತುಗಳನ್ನು ಕದ್ದೊಯ್ದಿದ್ದಾರೆ ಎಂದು ಶಾಲಾ ಮುಖ್ಯ ಶಿಕ್ಷಕ ನಿಂಗರಾಜು ದೂರು ನೀಡಿದ್ದಾರೆ. ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.