ಜಿಲ್ಲೆ

ಅರಾಭಿಕೊತ್ತನೂರು ಶಾಲೆಯಲ್ಲಿ ಕಳವು

ಕೋಲಾರ ಡೆಸ್ಕ್


ಕೋಲಾರ:- ತಾಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆಯ ಬೀಗ ಮುರಿದ ಚೋರರು ಎರಡು ಯುಪಿಎಸ್​ ಹಾಗೂ ಎರಡು ಬ್ಯಾಟರಿ ಕಳುವು ಮಾಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಮೂರು ದಿನಗಳ ಹಿಂದಷ್ಟೇ ಶಾಲೆಯ 9ನೇ ತರಗತಿ ಕೊಠಡಿಯ ಬಾಗಿಲ ಚಿಲಕವನ್ನು ಗಡಾರಿಯಿಂದ ಮೀಟಿ ತುಂಡರಿಸಿದ್ದ ಕಳ್ಳರು ಅದರಲ್ಲಿದ್ದ ಸ್ಮಾರ್ಟ್​ಕ್ಲಾಸ್​ಗೆ ಬಳಸುತ್ತಿದ್ದ ಯುಪಿಎಸ್​ ಹಾಗೂ ಬ್ಯಾಟರಿ ಕಳುವು ಮಾಡಿದ್ದರು.

ಇದಾದ ನಂತರ ಮಂಗಳವಾರ ರಾತ್ರಿ ಮತ್ತೊಮ್ಮ ಕೈಚಳಕ ತೋರಿಸಿದ್ದು, ಗ್ರಂಥಾಲಯದಲ್ಲಿ ಸ್ಮಾರ್ಟ್​ ಕ್ಲಾಸ್​ಗೆ ಬಳಸುತ್ತಿದ್ದ ಯುಪಿಎಸ್​ ಹಾಗೂ ಬ್ಯಾಟರಿ ಕಳುವು ಮಾಡಿದ್ದಾರೆ. ಸರ್ಕಾರಿ ಶಾಲೆಯಲ್ಲಿ ದಾನಿಗಳ ನೆರವಿನಿಂದ ಎಲ್ಲ ಕೊಠಡಿಗಳಿಗೂ ಸ್ಮಾರ್ಟ್​ ಕ್ಲಾಸ್​ ಅಳವಡಿಕೆ ಮಾಡಲಾಗಿದೆ. ಇದನ್ನು ಸಹಿಸದ ಚೋರರು ದುಷತ್ಯ ಎಸಗಿದ್ದು, ಸ್ಥಳಕ್ಕೆ ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ಕಾಂತರಾಜು, ಬಿಇಒ ಉಮಾದೇವಿ, ಎಸ್​ಡಿಎಂಸಿ ಅಧ್ಯಕ್ಷ ರಾಘವೇಂದ್ರ, ಸಿಆರ್​ಪಿ ಬಸವರಾಜು ಭೇಟಿ ನೀಡಿದ್ದರು. ಈ ಸಂಬಂಧ ಗ್ರಾಮಾಂತರಠಾಣೆಗೆ ದೂರು ನೀಡಲಾಗಿದೆ.