ಕಿಕ್ಕೇರಿ: ಇಲ್ಲಿನ ರಾಜ್ಯ ಹೆದ್ದಾರಿಯಲ್ಲಿರುವ ಚಿಲ್ಲರೆ ಅಂಗಡಿಯಲ್ಲಿ ಖದೀಮರು ಸಿಗರೇಟು ಪ್ಯಾಕ್‌ಗಳನ್ನು ಕಳವು ಮಾಡಿದ್ದಾರೆ.
ಶುಕ್ರವಾರ ಅಂಗಡಿ ಮಾಲೀಕ ಜೇಟುಸಿಂಗ್ ತಮ್ಮ ಅಂಗಡಿಗೆ ಸಿಗರೇಟ್ ಬಂಡಲ್‌ಗಳನ್ನು ಇಳಿಸಿಕೊಳ್ಳುತ್ತಿದ್ದರು. ಶುಕ್ರವಾರ ಸಂತೆ ದಿನವಾಗಿದ್ದರಿಂದ ಬೆಳಗ್ಗಿನ ವೇಳೆ ವ್ಯಾಪಾರ ಹೆಚ್ಚಿತ್ತು. ಈ ವೇಳೆಯಲ್ಲಿ ದುಷ್ಕರ್ಮಿ ವಿಜಿ ಎಂಬಾತ ತಮ್ಮ ಅಂಗಡಿಯ ಸಿಗರೇಟು ಪ್ಯಾಕ್ ಕಳವು ಮಾಡಿದ್ದಾನೆ ಎಂದು ಕಿಕ್ಕೇರಿ ಪೊಲೀಸರಿಗೆ ಅಂಗಡಿ ಮಾಲೀಕ ದೂರು ನೀಡಿದ್ದಾರೆ. ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.