ಉಪ್ಪಿನಂಗಡಿ : 34ನೇ ನೆಕ್ಕಿಲಾಡಿ ಬೊಳ್ಳಾರ್ ಎಂಬಲ್ಲಿ ಪಂಚರ್ ಜಯರಾಮ ಎಂಬುವರ ಟಯರ್ ವರ್ಕ್‌ಶಾಪ್‌ನಿಂದ ಜಾಕ್, ಟ್ಯೂಬ್ ಸಹಿತ ಹಲವು ವಸ್ತುಗಳನ್ನು ಕಳ್ಳರು ಬುಧವಾರ ರಾತ್ರಿ ಕದ್ದೊಯ್ದಿದ್ದಾರೆ. ಜಯರಾಮ ಮಧ್ಯರಾತ್ರಿವರೆಗೆ ವರ್ಕ್‌ಶಾಪ್‌ನಲ್ಲಿದ್ದರು. ಮನೆಗೆ ತೆರಳಿದ ಬಳಿಕ ಕಳ್ಳರು ಬೀಗ ಮುರಿದು ಜಾಕ್, ಹೊಸ ಟ್ಯೂಬ್‌ಗಳನ್ನು , ಟಯರ್ ಪ್ಲೇಟ್‌ಗಳನ್ನು ಕದ್ದೊಯ್ದಿದ್ದಾರೆ. ಉಪ್ಪಿನಂಗಡಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.