ಜಿಲ್ಲೆ

ಮನೆಯಲ್ಲಿ ಕಳವುಗೈದ ದಂಪತಿ ಸೆರೆ

Dakshina Kannada

ವಿಟ್ಲ: ದಂಬೆತಾರು ನಿವಾಸಿ ವಿನಯಚಂದ್ರ ನಾಯಕ್ ಎಂಬುವರ ಮನೆಯಿಂದ ಚಿನ್ನಾಭರಣ ಕಳವುಗೈದ ಪ್ರಕರಣದಲ್ಲಿ ಮನೆ ಕೂಲಿ ಕೆಲಸಕ್ಕಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸರ್ವೆ ನಿವಾಸಿ ಸುಮತಿ ಯಾನೆ ಸುಮಾ(25), ಪ್ರಮೋದ್(26) ಬಂಧಿತರು. ಜೂನ್ 8ರಂದು ಮನೆಯ ಬೆಡ್‌ರೂಂನ ಕಪಾಟಿನಲ್ಲಿದ್ದ ಬ್ರಾಸ್‌ಲೇಟ್, ಚಿನ್ನದ ಲಕ್ಷ್ಮೀ ಚೈನ್, ಪದಕ ಸಹಿತ ಚೈನ್, 3 ಉಂಗುರ ಸೇರಿ 98 ಗ್ರಾಂ ಚಿನ್ನಾಭರಣ ಕಳವಾಗಿತ್ತು. ಕಳವಾಗಿದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.