ಜಿಲ್ಲೆ

ಕಾಲೇಜ್ ಬೀಗ ಮುರಿದು 2.16 ಲಕ್ಷ ನಗದು ಕಳುವು

Uttara Kannada - Subash Hegde

ಕುಮಟಾ: ಪಟ್ಟಣದ ಹನುಮಂತ ಬೆಣ್ಣೆ ಸರಕಾರಿ ಪದವಿಪೂರ್ವ ಕಾಲೇಜ್ ನಲ್ಲಿ ಕಳ್ಳತನ ಘಟನೆ ನಡೆದಿದೆ. ಕಾಲೇಜ್ ನ ಕಾರ್ಯಾಲಯ ಕೊಠಡಿಯ ಬೀಗ ಮುರಿದು ಅಲ್ಮೆರಾ ಲಾಕರ್ ಮುರಿದು ಬರೋಬ್ಬರಿ 2 ಲಕ್ಷ 16 ಸಾವಿರ ಕಳ್ಳತನ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:

ಬುಧವಾರ ತಡರಾತ್ರಿ ಈ ಕಳ್ಳತನ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ, ಕಾರವಾರದಿಂದ ಬೆರಳಚ್ಚು ತಜ್ಙರು ಆಗಮಿಸಿದ್ದು ಪರೀಶೀಲನೆ ನಡೆಸಿದ್ದಾರೆಂದು ತಿಳಿದುಬಂದಿದೆ.
ಕುಮಟಾ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ