ಜಿಲ್ಲೆ

ದೇವಸ್ಥಾನಕ್ಕೆ ಹೋಗಿ ಬರುವಷ್ಟರಲ್ಲಿ ಮನೆಯಲ್ಲಿದ್ದ ತೊಲಗಟ್ಟಲೆ ಚಿನ್ನಾಭರಣ ಕಳವು!

ಕೊಪ್ಪಳ: ಹರಕೆ ತೀರಿಸುವ ಸಲುವಾಗಿ ದೇವಸ್ಥಾನಕ್ಕೆ ಹೋಗಿ ಬರುವಷ್ಟರಲ್ಲಿ ಮನೆಯಲ್ಲಿದ್ದ ತೊಲಗಟ್ಟಲೆ ಚಿನ್ನಾಭರಣ ಕಳವಾದ ಪ್ರಕರಣವೊಂದು ನಡೆದಿದೆ. ಕೊಪ್ಪಳ ಜಿಲ್ಲೆಯಲ್ಲಿ ಈ ಕಳ್ಳತನ ನಡೆದಿದೆ.

ಗಂಗಾವತಿನಗರ ಲಲಿತ ಮಹಲ್ ಹೋಟೆಲ್ ಹಿಂಭಾಗ ಇರುವ ಶ್ರೀನಿವಾಸ ಎಂಬವರ ಮನೆಯಲ್ಲಿ ಈ ಕಳವು ನಡೆದಿದೆ. ಈ ಪ್ರಕರಣದಲ್ಲಿ ಮನೆಯಲ್ಲಿದ್ದ 21 ತೊಲ ಚಿನ್ನಾಭರಣಗಳನ್ನು ಕದ್ದುಕೊಂಡು ಹೋಗಲಾಗಿದೆ.

ಈ ಮನೆಯವರು ಮೂರು ದಿನಗಳ ಹಿಂದೆ ಹರಕೆ ತೀರಿಸುವ ಸಲುವಾಗಿ ಧರ್ಮಸ್ಥಳ ದೇವಸ್ಥಾನಕ್ಕೆ ಹೋಗಿದ್ದರು. ಈ ಸಮಯದಲ್ಲಿ ಮನೆಯ ಬಾಗಿಲು ಮುರಿದು ಒಳಹೊಕ್ಕಿದ್ದ ಕಳ್ಳರು 21 ತೊಲ ಚಿನ್ನಾಭರಣಗಳನ್ನು ಕದ್ದುಕೊಂಡು ಹೋಗಿದ್ದಾರೆ. ಇಂದು ಮನೆಯವರು ಮರಳಿದಾಗ ಕಳ್ಳತನ ಆಗಿರುವುದು ಗೊತ್ತಾಗಿದೆ. ಗಂಗಾವತಿ ನಗರ ಠಾಣೆ ಪೊಲೀಸರಿಗೆ ದೂರು ನೀಡಲಾಗಿದ್ದು, ಪರಿಶೀಲನೆ ನಡೆಯುತ್ತಿದೆ.