ಜಿಲ್ಲೆ

Theft: ಎಎಸ್ ಐ ಮನೆಯಲ್ಲಿ 357 ಗ್ರಾಂ ಚಿನ್ನ ಕದ್ದ ಕಳ್ಳರು

Uttara Kannada - Subash Hegde

ಕಾರವಾರ/Theft case: ಎಎಸ್‌ಐ ಮನೆಗೇ ಕಳ್ಳರು ಕನ್ನ ಹಾಕಿದ್ದಾರೆ. ಎಸ್‌ಪಿ ಕಚೇರಿಯ ಡಿಸಿಆರ್‌ಬಿ ವಿಭಾಗದಲ್ಲಿ ಎಎಸ್‌ಐ ಆಗಿರುವ ಸ್ಮಿತಾ ಪಾವಸ್ಕರ್ ಅವರ ಮನೆಯಲ್ಲಿ ಯಾರೂ ಇಲ್ಲದಾಗ ನುಗ್ಗಿದ ಕಳ್ಳರು ಬಂಗಾರ ದೋಚಿದ್ದಾರೆ. ನಗರದ ಕುರ್ಸಾವಾಡದಲ್ಲಿರುವ ಸ್ಮಿತಾ ಅವರ ಮನೆಯಲ್ಲಿ ಒಟ್ಟು 357 ಗ್ರಾಂ ಬಂಗಾರವನ್ನು, 10 ಸಾವಿರ ರೂ. ನಗದು, ಹಾಗೂ ಬೆಳ್ಳಿಯನ್ನು ಕಳ್ಳರು ದೋಚಿದ್ದಾರೆ.

Theft

ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಸ್‌ಪಿ ಎಂ.ನಾರಾಯಣ ಅವರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕಳ್ಳನ‌ ಸಿಸಿ ಟಿವಿ ಫುಟೇಜ್‌ ಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.