ಜಿಲ್ಲೆ

ಕಳವು ಆರೋಪಿ ಬಂಧನ

ಎನ್.ವೆಂಕಟೇಶ್

ಚಿಂತಾಮಣಿ: ತಾಲೂಕಿನ ಚಿಲಕಲನೇರ್ಪು ಗ್ರಾಮದ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಕೆಂಚಾರ್ಲಹಳ್ಳಿ ಪಿಎಸ್​ಐ ಜಗದೀಶ್​ ತಂಡ ಬಂಧಿಸಿದೆ. ಅದೇ ಗ್ರಾಮದ ಶ್ರೀನಾಥ್​ (27)ಆರೋಪಿ. ಮನೆ ಮಾಲೀಕ ಸುಬ್ಬ ಪತ್ನಿ ವಾಣಿ ಆ.4ರಂದು ಮನೆಗೆ ಬೀಗ ಹಾಕಿ ಬೀಗದ ಕೈಯನ್ನು ಮನೆಯ ಸಜ್ಜಾ ಮೇಲೆ ಇಟ್ಟು, ಕೂಲಿ ಕೆಲಸಕ್ಕೆ ಹೋಗಿದ್ದರು. ಸಂಜೆ 7ಗಂಟೆಗೆ ವಾಪಸ್​ ಬಂದಾಗ ಬೀರುವಿನಲ್ಲಿದ್ದ ಚಿನ್ನಾಭರಣ ಹಾಗೂ 5 ಸಾವಿರ ರೂ.ಕಳ್ಳತನವಾಗಿದ್ದು, ಕೆಂಚಾರ್ಲಹಳ್ಳಿ ಠಾಣೆಯಲ್ಲಿ ಅ.5ರಂದು ಪ್ರಕರಣ ದಾಖಲಾಗಿತ್ತು. ಕೆಂಚಾರ್ಲಹಳ್ಳಿ ಪ್ರಭಾರ್​ ಪೊಲೀಸ್​ ಇನ್​ಸ್ಪೆಕ್ಟರ್​ ಪಿ.ಆರ್​.ಜನಾರ್ದನ ನೇತೃತ್ವದಲ್ಲಿ ಪಿಎಸ್​ಐ ಆರ್​.ಜಗದೀಶ್​ರೆಡ್ಡಿ ಅವರು ಅದೇ ಗ್ರಾಮದ ಶ್ರೀನಾಥನನ್ನು ವಶಕ್ಕೆ ಪಡೆದು, ಮಾಲನ್ನು ವಶಕ್ಕೆ ಪಡೆದಿದ್ದಾರೆ.