ಮಂಡ್ಯ: ಕೀಲಾರ ಗ್ರಾಮದ ಕ್ಷೀರಸಾಗರ ಮಿತ್ರಕೂಟದ ಬೆಳ್ಳಿಹಬ್ಬದ ವರ್ಷಾಚರಣೆ ಅಂಗವಾಗಿ 45 ದಿನದ ರಂಗ ತರಬೇತಿ ಶಿಬಿರ ಆಯೋಜಿಸುತ್ತಿದೆ ಎಂದು ಮಿತ್ರಕೂಟದ ಸಂಸ್ಥಾಪಕ, ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಕೀಲಾರ ಕೃಷ್ಣೇಗೌಡ ತಿಳಿಸಿದ್ದಾರೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣದ ನಿವೃತ್ತ ಪ್ರಾಧ್ಯಾಪಕ, ರಂಗಸಾಹಿತಿ ಡಾ.ಚಂದ್ರು ಕಾಳೇನಹಳ್ಳಿ ಆದಿಚುಂಚನಗಿರಿ ಮಹಿಮೆ ಕುರಿತ ಭೈರವ ವಿಜಯ ಕಥೆಯನ್ನು ರಂಗರೂಪಕ್ಕೆ ತರುತ್ತಿದ್ದಾರೆ. ಜಾನಪದ ಶೈಲಿಯ ಈ ಕಥೆಯನ್ನು ರಂಗಕರ್ಮಿ ಮಾಲತೇಶ್ ಬಡಿಗೇರ್ ನಿರ್ದೇಶನ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿದಿನ ಮಧ್ಯಾಹ್ನ 3ಗಂಟೆಯಿಂದ ರಾತ್ರಿ 7ರವರೆಗೆ ಮಂಡ್ಯ ನಗರದಲ್ಲಿ ನಡೆಯಲಿದೆ. ಆಸಕ್ತರು ಮೊ.ಸಂ 9901234334 ಹಾಗೂ 9620174111 ಯನ್ನು ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.