ಬೆಳಗಾವಿಯ ಗುರುಪ್ರಸಾದ ಕಾಲನಿಯಲ್ಲಿ ಈಚೆಗೆ ಜರುಗಿದ ಸಮಕಾಲೀನ ಕನ್ನಡ ರಂಗ ಗೀತೆಗಳು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಾಟಕಕಾರ ಡಿ.ಎಸ್.ಚೌಗಲೆ ಅವರಿಗೆ ಸಸಿ ನೀಡಲಾಯಿತು. ಆಶಾ ಯಮಕನಮರಡಿ, ಮಧು ಎಸ್.ಕೆ., ವೀಣಾ ಬಹದ್ದೂರ್‌ದೇಸಾಯಿ, ವೀಣಾ ಬಡಿಗೇರ, ಇಂದ್ರಜಾ ಬಹದ್ದೂರ್‌ದೇಸಾಯಿ, ಮಲ್ಲಿಕಾರ್ಜುನ ತಳವಾರ ಇದ್ದರು. 
ಜಿಲ್ಲೆ

ರಂಗಭೂಮಿ ಎಂದಿಗೂ ಬತ್ತದ ಸೃಜನಶೀಲ ಕಡಲು

ಬೆಳಗಾವಿ: ರಂಗಭೂಮಿ ಎಂಬುದು ಎಲ್ಲ ತೆರನಾದ ಕಲೆ, ಪಾಂಡಿತ್ಯ ಬಯಸುವ ಕ್ಷೇತ್ರ. ಇದನ್ನು ಪ್ರವೇಶಿಸುವವರು ಎಲ್ಲ ವಿಷಯಗಳನ್ನು ತಿಳಿದುಕೊಂಡಿದ್ದರೆ ಅವರ ವೃತ್ತಿ ಜೀವನ ಆಸಕ್ತಿಕರ ಹಾಗೂ ಲಪ್ರದವಾಗಿರುತ್ತದೆ ಎಂದು ನಾಟಕಕಾರ ಡಿ.ಎಸ್. ಚೌಗಲೆ ಅಭಿಪ್ರಾಯಪಟ್ಟರು.
ನಗರದ ಗುರುಪ್ರಸಾದ ಕಾಲನಿಯಲ್ಲಿ ಪದ್ಯ ಬಳಗ ಈಚೆಗೆ ಹಮ್ಮಿಕೊಂಡಿದ್ದ ಸಮಕಾಲೀನ ಕನ್ನಡ ರಂಗ ಗೀತೆಗಳು (ಹಾಡು, ಮಾತು, ಸಂವಾದ) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗಡಿನಾಡಿನಲ್ಲಿ ಕನ್ನಡ, ಮರಾಠಿ ರಂಗಭೂಮಿ ಮಧ್ಯೆ ಸಾಕಷ್ಟು ಕೊಡು-ಕೊಳ್ಳುವಿಕೆ ನಡೆದಿದೆ. ಮರಾಠಿ ರಂಗಭೂಮಿ ದೃಢಗೊಳ್ಳಲು ಕನ್ನಡದ ಕೆಲ ಪ್ರಕಾರಗಳು ಕಾರಣವಾದರೆ, ಮರಾಠಿ ನೆಲದ ನಾಟಕಗಳ ಪ್ರಭಾವ ಕನ್ನಡ ರಂಗಭೂಮಿ ಮೇಲೆ ಬೀರಿದೆ. ರಂಗಗೀತೆಗಳನ್ನು ಬರೆಯುವುದು, ಹಾಡುವುದು, ರಂಗದ ಮೇಲೆ ತರುವುದು ಸವಾಲಿನ ಕೆಲಸ. ಆದರೆ, ಸೃಜನಶೀಲ ಮನಸ್ಸುಗಳು ಇಂದಿಗೂ ರಂಗಭೂಮಿಯನ್ನು ಸಕ್ರಿಯವಾಗಿಟ್ಟಿವೆ. ರಂಗಭೂಮಿ ಎನ್ನುವುದು ಎಂದಿಗೂ ಬತ್ತದ ಸೃಜನಶೀಲ ಕಡಲು ಎಂದರು. ವೀಣಾ ಬಹದ್ದೂರ್‌ದೇಸಾಯಿ, ಮಲ್ಲಿಕಾರ್ಜುನ ತಳವಾರ, ಮಧು ಎಸ್.ಕೆ. ಅವರು ಕೆಲ ಟಿಪ್ಪಣಿ ಓದಿದರು. ಆಶಾ ಯಮಕನಮರಡಿ, ಸರಳಾ ಸಾತ್ಪುತೆ ರಂಗಗೀತೆ ಪ್ರಸ್ತುತಪಡಿಸಿದರು. ವೀಣಾ ಬಡಿಗೇರ ಸ್ವಾಗತಿಸಿದರು. ಸಹ್ಯಾದ್ರಿ ನಾಗರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಕೆ. ಮಧು ವಂದಿಸಿದರು.