ಯಲಬುರ್ಗಾ: ರಂಗಭೂಮಿ ಕಲೆಯಲ್ಲಿ ಜೀವಂತಿಕೆ ಇದ್ದು, ಅದನ್ನು ಉಳಿಸಿ-ಬೆಳೆಸುವ ಕೆಲಸ ಎಲ್ಲೆಡೆ ನಡೆಯಬೇಕಿದೆ ಎಂದು ಬೆಂಗಳೂರು ಪ್ರೀಮಿಯಂ ಸಿಡ್ಸ್ ಕಾರ್ಯನಿರ್ವಹಣಾ ಅಧಿಕಾರಿ ಡಾ.ವಿಠೋಬ ಚೌಡ್ಕಿ ಹೇಳಿದರು.
ಇದನ್ನೂ ಓದಿ:ರಂಗಭೂಮಿಗಿದೆ ಸಂಬಂಧ ಗಟ್ಟಿಗೊಳಿಸುವ ಶಕ್ತಿ
ತಾಲೂಕಿನ ಲಿಂಗನಬಂಡಿ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ಜಾತ್ರೆ ನಿಮಿತ್ತ ಹುಲಿಗೆಮ್ಮದೇವಿ ನಾಟ್ಯ ಸಂಘದಿಂದ ಸೋಮವಾರ ಹಮ್ಮಿಕೊಂಡಿದ್ದ ದೌರ್ಜನ್ಯ ತುಂಬಿದ ಸಾಮ್ರಾಜ್ಯ ಎಂಬ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಂಗಭೂಮಿಯಲ್ಲಿ ನಟಿಸುವುದು ಸವಾಲಿನ ಕೆಲಸ. ರಂಗಕಲೆ ಕರಗತ ಮಾಡಿಕೊಂಡರೆ ಉತ್ತಮ ನಾಟಕಗಳನ್ನು ಹೊರತರಬಹುದು. ಭಾವನಾತ್ಮಕ ಸಂಬಂಧ ಗಟ್ಟಿಗೊಳಿಸುವಲ್ಲಿ ಹಾಗೂ ಮಾನವೀಯತೆ ಬೆಳೆಸುವಲ್ಲಿ ರಂಗಭೂಮಿ ಕಲೆ ಸಹಕಾರಿಯಾಗಿದೆ. ಕಲಾವಿದರು ಹಾಗೂ ಕಲಾಸಕ್ತರು ಪ್ರೋತ್ಸಾಹಿಸಿ ರಂಗಭೂಮಿ ಬೆಳೆಸಬೇಕು ಎಂದರು.
ಗ್ರಾಮಸ್ಥ ಮಲ್ಲು ಮಾಟರಂಗಿ ಮಾತನಾಡಿ, ಲಿಂಗನಬಂಡಿ ಭಾವೈಕ್ಯದಿಂದ ಕೂಡಿದೆ. ಇಲ್ಲಿ ರಂಗಭೂಮಿ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಯುವಕರು ನಾಟಕದಲ್ಲಿ ಅಭಿನಯಿಸುವ ಮೂಲಕ ಕಲೆ ಉಳುವಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
ಮೌನೇಶ್ವರಮಠ ಮೌನೇಶ್ವರ ಸ್ವಾಮೀಜಿ, ಮಹೇಶ್ವರ ಸ್ವಾಮೀಜಿ ಹಿರೇಮಠ, ಗ್ರಾಪಂ ಮಾಜಿ ಅಧ್ಯಕ್ಷ ದೇವೇಂದ್ರಗೌಡ ಪಾಟೀಲ್, ಪ್ರಮುಖರಾದ ಮಲ್ಲಿಕಾರ್ಜುನ ನಿಟ್ಟಾಲಿ, ಮಹಾಂತೇಶ ವಾದಿ, ಮಳಿಯಪ್ಪ ಕಳ್ಳಿಮರದ, ಮಳೇಗೌಡ ಸಾಲಭಾವಿ, ತಿರುಪತಿ ವಜ್ರಬಂಡಿ, ರಾಮನಗೌಡ ಭಾವಿಕಟ್ಟಿ, ವಕೀಲ ಭರಮಗೌಡ ವೀರಾಪೂರ, ಷಣ್ಮುಖಪ್ಪ ಮೇಲಸಕ್ರಿ, ಪ್ರಭುಗೌಡ ಪಾಟೀಲ, ಸಣ್ಣಹನುಮಂತ ದೊಡ್ಡಮನಿ, ಹಾರ್ಮೊನಿಯಂ ಮಾಸ್ತರ ಭೀಮನಗೌಡ ಇತರರಿದ್ದರು.