ಜಮಖಂಡಿ ನಗರದ ಚರಂಡಿಯಲ್ಲಿ ಬಿದ್ದು ನರಳಾಡುತಿದ್ದ ಗೋವನ್ನು ರಕ್ಷಿಸಿದ ಮುಸ್ಲಿಂ ಯುವಕರು. 
ಜಿಲ್ಲೆ

ಚರಂಡಿಯಲ್ಲಿ ಬಿದ್ದಿದ್ದ ಗೋವು ರಕ್ಷಿಸಿದ ಯುವಕರು

ಜಮಖಂಡಿ: ನಗರದ ಚರಂಡಿಯಲ್ಲಿ ಬಿದ್ದು ಜೀವನ್ಮರಣದ ಮಧ್ಯೆ ನರಳಾಡುತ್ತಿದ್ದ ಗೋವನ್ನು ಮುಸ್ಲಿಂ ಯುವಕರು ರಕ್ಷಿಸಿದ್ದಾರೆ.

ನಗರದ ವಿಜಯಪುರ-ಧಾರವಾಡ ರಾಜ್ಯಹೆದ್ದಾರಿಯಲ್ಲಿ ಹೈದರಲಿ ವೃತ್ತದ ಬಳಿ ದೊಡ್ಡ ಚರಂಡಿಯಲ್ಲಿ ಗೋವು ಬಿದ್ದಿತ್ತು. ಇದನ್ನು ಗಮನಿಸಿದ ಮುಸ್ಲಿಂ ಸಮುದಾಯದ 10-15 ಯುವಕರು ಸೇರಿ ಹಗ್ಗದ ಸಹಾಯದಿಂದ ಗೋವನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಗೋವನ್ನು ರಕ್ಷಿಸಿದ ಮುಸ್ಲಿಂ ಯುವಕರ ಕಾರ್ಯಕ್ಕೆ ಗೋವು ಪ್ರೇಮಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಅಬು ಶಿರೋಳ, ಅಸ್ಲಂ ಝಾರೆ, ಸದ್ದಾಂ ಫೈಲ್ವಾನ್, ಅತಿಕ ಮಕಾನದಾರ, ತೌಫೀಕ್ ಪಕಾಲಿ, ನಜೀಬಲ್ಲಾ ತಹಸೀಲ್ದಾರ್, ಬಾಬಾಜಾನ ಕುಡಚಿ, ಯೂನೂಸ್ ಶಿರೋಳ ಇತರರಿದ್ದರು.