ಜಿಲ್ಲೆ

ದುಶ್ಚಟಗಳ ದಾಸರಾಗುತ್ತಿರುವ ಯುವಕರು

ಉಗರಗೋಳ: ಪ್ರಸ್ತುತ ದಿನಗಳಲ್ಲಿ ಯುವಕರು ದುಶ್ಚಟಗಳ ದಾಸರಾಗಿ ಅಮೂಲ್ಯ ಬದುಕು ಕಳೆದುಕೊಳ್ಳುತ್ತಿರುವುದು ಖೇದಕರ ಸಂಗತಿ ಎಂದು ಸಾಹಿತಿ ಶ್ರೀಧರ ಅಕ್ಕತಂಗಿಹಾಳ ಹೇಳಿದರು.

ಗ್ರಾಮದ ಶ್ರೀ ರೇಣುಕಾ(ಯಲ್ಲಮ್ಮ) ದೇವಿ ಪ್ರೌಢಶಾಲೆಯಲ್ಲಿ ಶ್ರೀ ೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್​ ಹಾಗೂ ಅಖಿಲ ಕರ್ನಾಟಕ ಜಿಲ್ಲಾ ಜನ ಜಾಗೃತಿ ವೇದಿಕೆ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿಯೊಬ್ಬರು ದುಶ್ಚಟಗಳಿಂದ ದೂರವಿದ್ದು, ಆರೋಗ್ಯಯುತ ಬದುಕು ಕಟ್ಟಿಕೊಳ್ಳಬೇಕು. ಜತೆಗೆ ಆದರ್ಶ ಮೌಲ್ಯ ರೂಢಿಸಿಕೊಂಡು ಸಮಾಜದಲ್ಲಿ ಮಾದರಿ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.

ಮುಖ್ಯಶಿಕಿ ಆರ್​.ಪಿ.ಪವಾರ, ತಾಲೂಕು ಯೋಜನಾಧಿಕಾರಿ ಸುಭ್ರಾಯ ನಾಯ್ಕ, ಬ್ರಹ್ಮಕುಮಾರಿ ರಾಜೇಶ್ವರಿ, ಮಾರುತಿ ಪತ್ರಾವಳಿ, ವಿಠ್ಠಲ ತಳವಾರ, ಮಹಾದೇವಿ ಕಾಳಪ್ಪನವರ, ಮಮತಾ ವೈದ್ಯ, ಗಂಗಮ್ಮ ಮಡಿವಾಳರ ಇತರರಿದ್ದರು.