ಜಿಲ್ಲೆ

ಕೃತಿ ಬಿಡುಗಡೆ 19ರಂದು

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಮಾಜ ವಿಜ್ಞಾನಿ ಡಾ. ಪ್ರಕಾಶ ಭಟ್​ ಅವರ ಕೃತಿ "ಹಳ್ಳಿಗಳನ್ನು ಕಟ್ಟುವ ಕಷ್ಟಸುಖ' ಬಿಡುಗಡೆ ಸಮಾರಂಭವನ್ನು ಮೇ 19ರಂದು ಬೆಳಗ್ಗೆ 10.30ಕ್ಕೆ ನಗರದ ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ್​ ಸಾಂಸತಿಕ ಸಭಾಭವನದಲ್ಲಿ ಏರ್ಪಡಿಸಲಾಗಿದೆ.
ಬೆಂಗಳೂರಿನ 'ಬಹುರೂಪಿ' ಹಾಗೂ ಸೂರಶೆಟ್ಟಿಕೊಪ್ಪದ 'ಸಮೋರ್ದಯ ಮಹಾಸಂಘ' ಸಹಯೋಗದಲ್ಲಿ ಆಯೋಜಿಸಿದ ಸಮಾರಂಭದಲ್ಲಿ ಸಾಹಿತಿ ನಾಗೇಶ ಹೆಗಡೆ ಅವರು ಕೃತಿ ಕುರಿತು ಮಾತನಾಡಲಿದ್ದಾರೆ. ನಂತರದಲ್ಲಿ ಡಾ. ಪ್ರಕಾಶ ಭಟ್​ ಅವರೊಂದಿಗೆ ಹಳ್ಳಿಗಳನ್ನು ಕಟ್ಟುವ ಕಷ್ಟ ಸುಖದ ಬಗ್ಗೆಯೇ ಸಂವಾದ ಜರುಗಲಿದೆ. ಹಿರಿಯ ಪತ್ರಕರ್ತ ಜಿ.ಎನ್​. ಮೋಹನ, ಬುಡಕಟ್ಟು ವಿವಿ ಕುಲಪತಿ ಡಾ. ತೇಜಸ್ವಿ ಕಟ್ಟಿನಮನಿ, ಹಿರಿಯ ಸಾಹಿತಿ ಡಾ. ಬಿಳಿಗೆರೆ ಕೃಷ್ಣಮೂತಿರ್ ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಸುನಂದಾ ಪ್ರಕಾಶ್​ ಅವರು ಈ ಇಡೀ ಹಳ್ಳಿ ಕಟ್ಟುವ ಪ್ರಕ್ರಿಯೆಗೆ ಪ್ರತಿಕ್ರಿಯಿಸಲಿದ್ದಾರೆ.
ಹಳ್ಳಿಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲಿ ಹೊಸ ಕಾಣಿಕೆ ನೀಡುವ ಕೃತಿ ಇದು. ಕಲಘಟಗಿ ತಾಲೂಕಿನ ಸೂರಶೆಟ್ಟಿಕೊಪ್ಪ ಹಾಗೂ ಶಿರಸಿ ತಾಲೂಕಿನ ದಾಸನಕೊಪ್ಪದ 50 ಹಳ್ಳಿಗಳು ಹೊಸ ಬೆಳಕಿನತ್ತ ಹೆಜ್ಜೆ ಹಾಕಿದ ಕಥನ ಇದು. ಈ ಕೃತಿಯನ್ನು ಈ ಹಳ್ಳಿಯವರೇ ಬಿಡುಗಡೆ ಮಾಡುತ್ತಿರುವುದು ವಿಶೇಷ ಎಂದು ಬಹುರೂಪಿ ಸ್ಥಾಪಕ ಶ್ರೀಜಾ ವಿ.ಎನ್​. ಹಾಗೂ ಸಮೋರ್ದಯ ಮಹಾಸಂಘದ ರೇಣಪ್ಪಗೌಡ ಭಾವಿಕಟ್ಟಿ ತಿಳಿಸಿದ್ದಾರೆ.