ಜಿಲ್ಲೆ

ಸ್ವಯಂ ಸೇವಕರ ಕಾರ್ಯ ಶ್ಲಾಘನೀಯ

Manikya M

ಹಳೆಯಂಗಡಿ: ಸರ್ಕಾರ ಸ್ವಚ್ಛತೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟು ಅನೇಕ ಕಾನೂನು ತಂದರೂ ಜನರು ಇನ್ನೂ ಸ್ವಚ್ಛತೆ ಬಗ್ಗೆ ಪ್ರಾಮುಖ್ಯ ನೀಡದೆ ಇರುವುದು ದುರಾದೃಷ್ಟಕರ. ಇದಕ್ಕೆ ಪೂರಕವಾಗಿ ಇನಿನಿಟಿ ತಂಡದ ಸ್ವಯಂ ಸ್ವಯಂ ಸೇವಕರು ಸ್ವಚ್ಛತೆ ಬಗ್ಗೆ ಹಾಕಿಕೊಂಡ ಕಾರ್ಯ ಶ್ಲಾಘನೀಯ ಎಂದು ಹಳೆಯಂಗಡಿ ಸಿಎಸ್‌ಐ ಅಮ್ಮನ್ ಮೆಮೊರಿಯಲ್ ಚರ್ಚ್ ಸಮಿತಿ ಕಾರ್ಯದರ್ಶಿ ಲಾವಣ್ಯ ಕೋಟ್ಯಾನ್ ಹೇಳಿದರು.

ಸಸಿಹಿತ್ಲು ಬೀಚ್ ಕಿನಾರೆಯಲ್ಲಿ ಇನಿನಿಟಿ ಸಮೂಹ ಸದಸ್ಯರು ಹಮ್ಮಿಕೊಂಡ ಬೀಚ್ ಕ್ಲೀನಿಂಗ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಖ್ಯಸ್ಥ ಶ್ರೀಶೈಲೇಶ ಆರ್ ಸ್ವಾಗತಿಸಿದರು. ಗ್ರೀಷ್ಮಾ ವಂದಿಸಿದರು. ಅಲೆನ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ತಂಡದ 35 ಸದಸ್ಯರು ಸಸಿತ್ರು ಬೀಚ್ ಕಿನಾರೆಯಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.