ಜಿಲ್ಲೆ

ಛಾಯಾಗ್ರಾಹಕರ ಕಾರ್ಯ ಶ್ಲಾಘನೀಯ

ನರಗುಂದ: ಪ್ರಕೃತಿ ಸೌಂದರ್ಯ, ಸಮಯ ಸೆರೆಹಿಡಿಯುವ ಸಾಮರ್ಥ್ಯ ಛಾಯಾಗ್ರಾಹಕರಲ್ಲಿದೆ. ಒಂದು ಚಿತ್ರ ಸಾವಿರ ಪದಗಳಿಗೆ ಸಮ ಎಂದು ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ತಾಲೂಕಾಧ್ಯಕ್ಷ ಸಂಜೀವಕುಮಾರ ಮುಧೋಳೆ ಹೇಳಿದರು.
ಪಟ್ಟಣದ ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ ನರಗುಂದ ತಾಲೂಕು ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ 184ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹೆಚ್ಚುತ್ತಿರುವ ಮೊಬೈಲ್ ಬಳಕೆ, ಡಿಜಿಟಲ್ ಕಾರಣಾಂತರಗಳಿಂದ ಫೋಟೋಗ್ರಾಫರ್​ಗಳ ವೃತ್ತಿಗೆ ಸಾಕಷ್ಟು ಹೊಡೆತ ಬಿದ್ದಿದೆ ಎಂದು ತಿಳಿಸಿದರು.
ಪತ್ರಿವನಮಠದ ಗುರುಸಿದ್ಧವೀರ ಶಿವಯೋಗಿ ಶಿವಾಚಾರ್ಯರು, ಮಾಜಿ ಶಾಸಕ ಬಿ.ಆರ್. ಯಾವಗಲ್ಲ ಮಾತನಾಡಿದರು.
ಭೈರನಹಟ್ಟಿ ಶಾಂತಲಿಂಗ ಸ್ವಾಮೀಜಿ, ವಿರಕ್ತಮಠದ ಶಿವಕುಮಾರ ಸ್ವಾಮೀಜಿ, ಗುಡ್ಡದ ಹಿರೇಮಠದ ಸಿದ್ಧಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. ಛಾಯಾಗ್ರಾಹಕರ ಸಂಘದ ತಾಲೂಕಾಧ್ಯಕ್ಷ ಮಹೇಶ ಬಡಿಗೇರ, ಅಂದಾನಯ್ಯ ಹಿರೇಮಠ, ನಜೀರಸಾಬ್ ರೋಣದ, ಅರುಣಕುಮಾರ ಕುಟಕನಕೇರಿ, ರಾಕೇಶ ಮಾಳದಕರ, ವೀರೇಶ ಕೊಡಬಳಿ, ಮುತ್ತು ಕುಮ್ಮಿ, ಶ್ರೀಧರ ಮುಧೋಳೆ, ಶರಣಪ್ಪ ಪೊಲೀಸ್ ಪಾಟೀಲ, ರಾಮು ಮಾಯಾಚಾರಿ, ಪ್ರಕಾಶ ಯಾವಗಲ್ಲ, ಸಂಜು ಸುಣಗಾರ, ವಿಶ್ವನಾಥ ಮಠಪತಿ, ಸಿದ್ದು ನಂದಿ, ಮಹೇಶ ಬಡಿಗೇರಿ, ಪ್ರಕಾಶ ನಂದಿ, ಇದ್ದರು. ಶರಣಪ್ಪ ಹೂಗಾರ, ಹೇಮಾ ಬಡಿಗೇರ ಹಾಗೂ ಆರ್.ಬಿ. ಚಿನಿವಾಲರ ಕಾರ್ಯಕ್ರಮ ನಿರ್ವಹಿಸಿದರು.