ಸಂಕೇಶ್ವರ: ಕಾಯಕದಲ್ಲಿ ಕೈಲಾಸ ಕಂಡ ಹೂಗಾರ ಮಾದಯ್ಯ ದಂಪತಿ ಕಾರ್ಯ ಸಮಾಜಕ್ಕೆ ಅನುಕರಣೀಯ ಎಂದು ಹಿರಿಯ ಸಾಹಿತಿ ಸರಜೂ ಕಾಟ್ಕರ್ ಹೇಳಿದರು.
ಸಮೀಪದ ನಿಡಸೋಸಿ ದುರದುಂಡೀಶ್ವರ ಸಿದ್ಧಸಂಸ್ಥಾನ ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹೂಗಾರ ಮಾದಯ್ಯ ಜಯಂತ್ಯುತ್ಸವದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಹಾಗೂ ಕಿತ್ತೂರು ಚನ್ನಮ್ಮ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಹೂಗಾರ ಸಮುದಾಯ ಧಾರ್ಮಿಕ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದು, ಮಾದಯ್ಯನವರ ಆದರ್ಶ ಎಲ್ಲರೂ ರೂಢಿಸಿಕೊಳ್ಳಬೇಕು ಎಂದರು.
ನಿಡಸೋಸಿ ಜಗದ್ಗುರು ಡಾ.ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಒಬ್ಬ ಭಕ್ತನ ಶಕ್ತಿ ಎಂತಹದ್ದು ಎನ್ನುವುದನ್ನು ಹೂಗಾರ ಮನೆತನದ ನಿಜಲಿಂಗೇಶ್ವರರ ಭಕ್ತಿಗೆ ನಿಡಸೋಸಿ ಮಠ ಸ್ಥಾಪನೆಯಾಗಿದೆ. ಮಾದಯ್ಯನ ಕಾರ್ಯಗಳೇ ಸಾಧನೆಗೆ ಸೂರ್ತಿ ಎಂದರು.
ಹುಕ್ಕೇರಿ ತಾಲೂಕು ಹೂಗಾರ ಯುವಸೇನೆ ವತಿಯಿಂದ ಮಾದಯ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ನಿಂಗಪ್ಪ ಗುರವ, ಈರಣ್ಣ ಗುರವ, ಮೃತ್ಯುಂಜಯ ಹೂಗಾರ, ಕೆಂಪಣ್ಣ ಹೂಗಾರ ಹಾಗೂ ಗುರವ ಸಂಘಟನೆಯ ಪದಾಧಿಕಾರಿಗಳಿದ್ದರು.