ಕುಂದಾಪುರ: ಯುವ ಬಂಟರ ಸಂಘ ಆಶ್ರಯದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ವಿದ್ಯಾರ್ಥಿವೇತನದ ಬದಲು ಆಧುನಿಕ ಕಲಿಕಾ ಸಾಧನ ವಿತರಿಸುವ ಕಾರ್ಯಕ್ರಮ ಮಾದರಿಯಾಗಿದೆ. ಇದರಿಂದ ಸಮುದಾಯದ ಮಕ್ಕಳ ಶೈಕ್ಷಣಿಕ ಉನ್ನತಿಗೆ ಇನ್ನಷ್ಟು ಉತ್ತೇಜನ ನೀಡಿದಂತಾಗಿದೆ ಎಂದು ಬೆಂಗಳೂರಿನ ಸೌತ್ ಫೀಲ್ಡ್ ಪೇಂಟ್ಸ್ ಆಡಳಿತ ನಿರ್ದೇಶಕ ಎಸ್.ಎಸ್.ಹೆಗ್ಡೆ ಶ್ಲಾಘಿಸಿದರು.
ಕುಂದಾಪುರದಲ್ಲಿ ಶನಿವಾರ ಕುಂದಾಪುರ ತಾಲೂಕು ಯುವ ಬಂಟರ ಸಂಘ ವತಿಯಿಂದ ಅರಿವು ಯೋಜನೆಯಡಿ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಧುನಿಕ ಕಲಿಕಾ ಸಾಧನಗಳ ಹಸ್ತಾಂತರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಬಂಟ ಸಾಧಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಯುವ ಬಂಟರ ಸಂಘ ಅಧ್ಯಕ್ಷ ನಿತೀಶ್ ಶೆಟ್ಟಿ ಬಸ್ರೂರು ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಲೆಕ್ಕಪರಿಶೋಧಕ ಸಿಎ ಸುಧಾಕರ ಹೆಗ್ಡೆ ಪ್ರಶಸ್ತಿ ಪ್ರದಾನ ಮಾಡಿದರು. ಮಣಿಪಾಲ ಕೆಎಂಸಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಅಭಿನಂದನಾ ನುಡಿಗಳನ್ನಾಡಿದರು. ಭದ್ರಾವತಿ ಬಂಟರ ಸಂಘ ಅಧ್ಯಕ್ಷ ದಿವಾಕರ ಶೆಟ್ಟಿ, ಬಂಟರ ಯಾನೆ ನಾಡವರ ಸಂಘ ಮಾಜಿ ಅಧ್ಯಕ್ಷ ಜಿ.ಶ್ರೀಧರ್ ಶೆಟ್ಟಿ ಅರಿವು ಯೋಜನೆಗೆ ಚಾಲನೆ ನೀಡಿದರು. ಸಂಘದ ಕುಂದಾಪುರ ತಾಲೂಕು ಸಮಿತಿ ಸಂಚಾಲಕ ಸಂಪತ್ ಕುಮಾರ್ ಶೆಟ್ಟಿ ಕಾವ್ರಾಡಿ, ವಕೀಲ ಟಿ.ಬಿ.ಶೆಟ್ಟಿ ಸಂಘ ಗೌರವಾಧ್ಯಕ್ಷೆ ವತ್ಸಲಾ ದಯಾನಂದ ಶೆಟ್ಟಿ, ಸ್ಥಾಪಕಾಧ್ಯಕ್ಷ ಡಾ.ಅಂಪಾರು ನಿತ್ಯಾನಂದ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮುರಳೀಧರ ಶೆಟ್ಟಿ ಹುಯ್ಯರು, ಕೋಶಾಧಿಕಾರಿ ಭರತರಾಜ್ ಶೆಟ್ಟಿ ಜಾಂಬೂರು, ಅರಿವು ಯೋಜನಾ ಸಂಚಾಲಕ ರಾಜೀವ ಶೆಟ್ಟಿ ಹೆಂಗವಳ್ಳಿ, ನಿರ್ದೇಶಕರಾದ ಡಾ.ರಂಜಿತ್ ಕುಮಾರ್ ಶೆಟ್ಟಿ, ಬೆಳ್ಳಾಡಿ ಅಶೋಕ ಶೆಟ್ಟಿ, ಬಿ.ವಿನಯಕುಮಾರ್ ಶೆಟ್ಟಿ, ಉದ್ಯಮಿ ಶಂಕರ ಹೆಗ್ಡೆ, ಉದ್ಯಮಿ ಜಯಕರ ಶೆಟ್ಟಿ ಪುಣೆ, ಜಯಶೀಲ ಶೆಟ್ಟಿ ಉಪ್ಪುಂದ, ನಾರಾಯಣ ಶೆಟ್ಟಿ, ಶಕೀಲಾ ಸುಕುಮಾರ್ ಶೆಟ್ಟಿ ಬಂಟಕೋಡು, ಆನಗಳ್ಳಿ ಕರುಣಾಕರ ಹೆಗ್ಡೆ, ಆಜ್ರಿ ದಯಾನಂದ ಶೆಟ್ಟಿ ಆಸ್ಟ್ರೇಲಿಯಾ, ಸುಗ್ಗಿ ಸುಧಾಕರ ಶೆಟ್ಟಿ ಹುಬ್ಬಳ್ಳಿ, ಹಂಸರಾಜ ಶೆಟ್ಟಿ, ವೈಶಾಲಿ ಕುಂದಾಪುರ, ಅಶೋಕ ಶೆಟ್ಟಿ ಸಂಸಾಡಿ, ಸಟ್ವಾಡಿ ವಿಜಯ ಶೆಟ್ಟಿ, ಸುಧಾಕರ ಶೆಟ್ಟಿ ನೆಲಗೊಂಡ, ಶಿವರಾಮ ಶೆಟ್ಟಿ ಕರೀಂನಗರ, ಗೋಕುಲ ಶೆಟ್ಟಿ ಉಪ್ಪುಂದ, ಬಿ.ಜಯರಾಮ ಶೆಟ್ಟಿ, ಸಿಎ ಶಾಂತಾರಾಮ ಶೆಟ್ಟಿ, ಶಂಕರ ಶೆಟ್ಟಿ ಕೂಡಾಲು, ಗುತ್ತಿಗೆದಾರ ಉದಯ ಶೆಟ್ಟಿ ತಲ್ಲೂರು ಮತ್ತಿತರಿದ್ದರು. ಉಪಪ್ರಾಂಶುಪಾಲ ಡಾ.ಚೇತನ್ ಶೆಟ್ಟಿ ಸ್ವಾಗತಿಸಿದರು. ಹಳ್ನಾಡು ಪ್ರತಾಪಚಂದ್ರಶೆಟ್ಟಿ ಪ್ರಸ್ತಾವಿಸಿದರು. ಉಪನ್ಯಾಸಕ ಅಕ್ಷಯ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ವಿವಿಧ ಕ್ಷೇತ್ರದ ಸಾಧಕರಾದ ಆನಗಳ್ಳಿ ಜಯಕರ ಹೆಗ್ಡೆ, ಡಾ.ಎಂ.ಸಚ್ಚಿದಾನಂದ ಶೆಟ್ಟಿ, ಜಿ.ಸಂತೋಷ ಕುಮಾರ್ ಶೆಟ್ಟಿ, ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಸಭಾಪತಿ ಎಸ್.ಜಯಕರ ಶೆಟ್ಟಿ, ಅರುಣ್‌ಕುಮಾರ್ ಹೆಗ್ಡೆ ಯಡಾಡಿ ಮತ್ಯಾಡಿ, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ, ಸುರತ್ಕಲ್ ಎನ್‌ಐಟಿಕೆ ಡೀನ್ ಡಾ.ಚಿತ್ತರಂಜನ್ ಹೆಗ್ಡೆ, ಬಾಲಕೃಷ್ಣ ಶೆಟ್ಟಿ ಅಂಪಾರು, ಎಸ್‌ಸಿಡಿಸಿ ಬ್ಯಾಂಕ್ ನಿರ್ದೇಶಕ ಎಂ.ಮಹೇಶ್ ಹೆಗ್ಡೆ ಅವರಿಗೆ ಬಂಟ ಸಾಧಕ ಪ್ರಶಸ್ತಿ ಪ್ರದಾನ ಮಾಡಲಾಯಿತು.