ಹುಬ್ಬಳ್ಳಿ: ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಆಪರೇಷನ್ ಸಿಂಧೂರ ಮೂಲಕ ಭಾರತೀಯ ಸೇನಾಪಡೆ ನಡೆಸಿದ ಕಾರ್ಯ ಶ್ಲಾಘನೀಯ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸದಾನಂದ ಡಂಗನವರ ಹೇಳಿದ್ದಾರೆ.
ದೇಶದ ಹೆಮ್ಮೆಯ ಮೂರು ಸೇನೆಗಳು ಪಾಕಿಸ್ತಾನದ 9 ಕಡೆ ಏಕಕಾಲಕ್ಕೆ ದಾಳಿ ನಡೆಸಿ ಉಗ್ರರನ್ನು ಸದೆಬಡಿದಿದೆ. ಜಾಗತಿಕ ಮಟ್ಟದಲ್ಲಿ ಪ್ರಶಂಸೆ ವ್ಯಕ್ತವಾಗಿದ್ದು ಉಗ್ರಸಂಹಾರಕ್ಕೆ ಜೀವದ ಹಂಗು ತೊರೆದು ಎದೆ ತಟ್ಟಿ ನಿಂತ ಸೈನಿಕರ ಕಾರ್ಯ ಶ್ಲಾಘನೀಯ. ಇನ್ನೊಮ್ಮೆ ಭಾರತ ದೇಶದ ತಂಟೆಗೆ ಬಂದರೆ ಸೇನೆಯ ನಿರ್ಣಯ ಇದಕ್ಕಿಂತ ಕಠೋರವಾಗಿರಲಿದೆ ಎಂಬುದನ್ನು ತೋರಿಸಿಕೊಟ್ಟಿದೆ ಎಂದಿದ್ದಾರೆ.