ಶಿರಸಿಯಲ್ಲಿ ಫೆವರ್ರ‌್ಡ ಕ ಕಾರ್ಯಾಗಾರಕ್ಕೆ ಶಾಸಕ ಭೀಮಣ್ಣ ನಾಯ್ಕ ಚಾಲನೆ ನೀಡಿದರು. ಡಾ. ವೆಂಕಟೇಶ ನಾಯ್ಕ, ಸತೀಶ ನಾಯ್ಕ, ಮಹೇಶಚಂದ್ರಗುರು, ಗಣಪತಿ ಭಟ್ ಕರ್ಜಗಿ ಇತರರಿದ್ದರು. 
ಜಿಲ್ಲೆ

ಸ್ವಯಂ ಸೇವಾ ಸಂಸ್ಥೆಗಳಿಂದ ಸಮಾಜಕ್ಕೆ ದಿಕ್ಕು ತೋರುವ ಕಾರ್ಯ

ಶಿರಸಿ: ಸರ್ಕಾರದ ಸೌಲಭ್ಯಗಳನ್ನು ಜನತೆಗೆ ತಲುಪಿಸುವಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಪಾತ್ರ ದೊಡ್ಡದು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ನಗರದ ಟಿಎಂಎಸ್ ಸಭಾಂಗಣದಲ್ಲಿ ನಗರ ಮತ್ತು ಗ್ರಾಮಾಭ್ಯುದಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ವತಿಯಿಂದ ಬುಧವಾರ ಆಯೋಜಿಸಿದ್ದ ಬೆಳಗಾವಿ ವಿಭಾಗ ಮಟ್ಟದ ಆರು ಜಿಲ್ಲೆಗಳ ಸ್ವಯಂ ಸೇವಾ ಸಂಸ್ಥೆಗಳ ಕಾರ್ಯತಂತ್ರ ಹಾಗೂ ನೀತಿ ನಿರೂಪಣಾ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಮಾಜದ ಸ್ವಾಸ್ಥೃಕ್ಕೆ ಸರಿಯಾದ ದಿಕ್ಕು ತೋರಿಸುವ ಕಾರ್ಯವನ್ನು ಸ್ವ ಸಹಾಯ ಸಂಘಗಳು ಮಾಡುತ್ತ ಬಂದಿವೆ. ಇಲಾಖೆಗಳ ಅಧಿಕಾರಿಗಳ ಕೊರತೆ ನೀಗಿಸಲು ಸ್ವಯಂ ಸೇವಾ ಸಂಘಗಳ ಜವಾಬ್ದಾರಿ ವಹಿಸಬೇಕಿದೆ ಎಂದರು.

ಫೆವಾರ್ಡ್-ಕ ನಿಕಟಪೂರ್ವ ಅಧ್ಯಕ್ಷ ಆಂಜನೇಯ ರೆಡ್ಡಿ ಮಾತನಾಡಿ, ಸ್ವಯಂ ಸೇವಾ ಸಂಸ್ಥೆಗಳು ಹಣಕ್ಕಾಗಿ ಮಾತ್ರ ಕೆಲಸ ಮಾಡುತ್ತಿಲ್ಲ. ಸಮಾಜಕ್ಕೆ ಅಳಿಲು ಸೇವೆ ಮಾಡುವ ಉದ್ದೇಶದಿಂದ ಹಲವು ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಕೊಡ್ವೆಸ್ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ ವಹಿಸಿದ್ದರು. ಫೆವಾರ್ಡ್ -ಕ ಪ್ರಧಾನ ಕಾರ್ಯದರ್ಶಿ ಬಿ.ಟಿ. ಭದ್ರೇಶ್ ಪ್ರಾಸ್ತಾವಿಕ ಮಾತನಾಡಿದರು. ಫೆವಾರ್ಡ್-ಕ ರಾಜ್ಯಾಧ್ಯಕ್ಷ ಮಹೇಶಚಂದ್ರಗುರು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಸತೀಶ ನಾಯ್ಕ, ಮನುವಿಕಾಸ ಸಂಸ್ಥೆಯ ಗಣಪತಿ ಭಟ್, ಬೆಳಗಾವಿಯ ಡಾ. ಜಯಶ್ರೀ ಹಿರೇಮಠ, ಡಾ. ಬಾಬು ಸಜ್ಜನ್ ಇತರರಿದ್ದರು.