ಬೆಳಗಾವಿ: ಪತ್ರಕರ್ತರು ಸಮಾಜದ ಒಂದು ಅವಿಭಾಜ್ಯ ಭಾಗವಾಗಿದ್ದಾರೆ. ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಕೆಎಲ್ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು.
ನಗರದ ಎಸ್.ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಶಿವಕುಮಾರ ಸಂಬರಗಿಮಠ ಸಭಾಗೃಹದಲ್ಲಿ ಬೆಳಗಾವಿ ಪತ್ರಕರ್ತರ ಸಂದಿಂದ ಶನಿವಾರ ಆಯೋಜಿಸಿದ್ದ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪತ್ರಕರ್ತರ ಮಕ್ಕಳನ್ನು ಪುರಸ್ಕರಿಸಿ ಅವರು ಮಾತನಾಡಿದರು.
ಪತ್ರಕರ್ತರು ಬಿಡುವಿಲ್ಲದ ಕೆಲಸದಲ್ಲಿ ತಮ್ಮ ಕುಟುಂಬದ ಬಗ್ಗೆ ಕಾಳಜಿ ತೋರಿಸಲು ಆಗುವುದಿಲ್ಲ. ಕೆಲ ಪತ್ರಕರ್ತರಿಗೆ ತಮ್ಮ ಮಕ್ಕಳು ಯಾವ ತರಗತಿಯಲ್ಲಿದ್ದಾರೆನ್ನುವುದೂ ಗೊತ್ತಿರುವುದಿಲ್ಲ. ಅಷ್ಟೊಂದು ತಮ್ಮ ವೃತ್ತಿಯಲ್ಲಿ ಮಗ್ನರಾಗಿರುತ್ತಾರೆ. ಆದರೆ, ಪತ್ರಕರ್ತರು ತಮ್ಮ ಮಕ್ಕಳಿಗೆ ಪ್ರತಕರ್ತರ ಸಂದಿಂದಲೇ ಪ್ರತಿಭಾ ಪುರಸ್ಕಾರ ನೀಡುವುದು ಇಲ್ಲಿವರೆಗೂ ಬೆಳಗಾವಿಯಲ್ಲಿ ನಡೆದಿರಲಿಲ್ಲ. ಇಂತಹ ಒಂದು ಒಳ್ಳೆಯ ಕಾರ್ಯ ಮಾಡುತ್ತಿರುವುದು ಖುಷಿ ಕೊಟ್ಟಿದೆ ಎಂದರು.
ಡಾ.ಪ್ರಭಾಕರ ಕೋರೆ ಜೀವನ ಮಾದರಿ: ಶಾಸಕ ಆಸೀಫ್ ಸೇಠ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಭವಿಷ್ಯ, ಕುಟುಂಬ ಹಾಗೂ ದೇಶದ ಬಗ್ಗೆಯೂ ಚಿಂತನೆ ಮಾಡಬೇಕು. ಸಾಧನೆ ಮಾಡುವ ಮೂಲಕ ತಂದೆ&ತಾಯಿ ಮತ್ತು ಸಮಾಜಕ್ಕೆ ಕೀರ್ತಿ ತರಬೇಕು. ಒಬ್ಬ ವ್ಯಕ್ತಿ ತನ್ನ ಕಠಿಣ ಪರಿಶ್ರಮದಿಂದ ಮುಂದೆ ಬಂದು ಭವಿಷ್ಯದ ಬಗ್ಗೆ ಚಿಂತನೆ ಮಾಡಿದಲ್ಲಿ ಸಮಾಜದಲ್ಲಿ ಬದಲಾವಣೆ ತರಬಲ್ಲ. ಇದಕ್ಕೆ ಕೋರೆ ಅವರ ಜೀವನವೇ ಸಾಕ್ಷಿಯಾಗಿದೆ. ಅವರು ದೇಶ, ವಿದೇಶದಲ್ಲಿಯೂ ಕ್ರಾಂತಿ ಮಾಡಿದ್ದಾರೆ. ಇದನ್ನು ವಿದ್ಯಾರ್ಥಿಗಳು ತಮ್ಮ ಭವಿಷ್ಯಕ್ಕೆ ಮಾದರಿಯನ್ನಾಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಪತ್ರಕರ್ತರ ಕಾಲನಿಗೆ ಪ್ರಯತ್ನ: ಶಾಸಕ ಅಭಯ ಪಾಟೀಲ ಮಾತನಾಡಿ, ಬೆಳಗಾವಿ ಪ್ರಗತಿ ಹೊಂದುವಲ್ಲಿ ಜನಪ್ರತಿನಿಧಿ ಜತೆ ಪತ್ರಕರ್ತರ ಪಾತ್ರವೂ ಮುಖ್ಯವಾಗಿದೆ. ಅನೇಕ ಸಮಸ್ಯೆಗಳ ಬಗ್ಗೆ ಪತ್ರಕರ್ತರು ಗಮನ ಸೆಳೆದು ವರದಿ ಮಾಡಿದಾಗ, ಅದನ್ನು ಪರಿಹರಿಸುವ ಕಾರ್ಯಗಳಾಗಿವೆ. ಹೀಗಾಗಿ ಬೆಳಗಾವಿ ಪತ್ರಕರ್ತರಿಗಾಗಿ ಒಂದು ಪ್ರತ್ಯೇಕ ಕಾಲನಿ ಮಾಡುವ ಪ್ರಯತ್ನ ನಾವು ಹಿಂದೆ ಮಾಡಿದ್ದೇವು. ಅದು ಕಾರ್ಯಗತವಾಗಲಿಲ್ಲ. ಇಂದಿನ ಸರ್ಕಾರದ ಮುಂದೆ ಈ ಪ್ರಸ್ತಾಪವಿಟ್ಟು ಈ ಬೇಡಿಕೆ ಈಡೇರಿಸುವ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು. ನಗರ ಪೊಲೀಸ್ ಆಯುಕ್ತ ಭೂಷಣ ಗುಲಾಬರಾವ್ ಬೋರಸೆ, ಮೇಯರ್ ಮಂಗೇಶ ಪವಾರ, ಉಪಮೇಯರ್ ವಾಣಿ ಜೋಶಿ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಸಂದ ಅಧ್ಯಕ್ಷ ವಿಲಾಸ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಬೆಳ್ಳಿ ಚುಕ್ಕಿ ಸಾಂಸತಿಕ ಸಂದ ಸದಸ್ಯೆಯರು ಪ್ರಾರ್ಥಿಸಿದರು. ಸುನೀತಾ ದೇಸಾಯಿ ನಿರೂಪಿಸಿದರು. ಶ್ರೀಶೈಲ ಮಠದ ಸ್ವಾಗತಿಸಿದರು. ರವೀಂದ್ರ ಉಪ್ಪಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತೋಷ ಚಿನಗುಡಿ ವಂದಿಸಿದರು.
ಪತ್ರಿಕೆಗಳಲ್ಲಿ ಬರುವ ವಿಶೇಷ ಲೇಖನಗಳಿಗೆ ಹೆಚ್ಚು ಮಹತ್ವವಿದೆ. ತಮ್ಮ ವಿಶೇಷ ಲೇಖನಗಳಿಗೆ ಅಧಿಕ ಸಂಭಾವನೆ ಪಡೆದುಕೊಳ್ಳುವ ಅನೇಕ ವರದಿಗಾರರು ದೇಶದಲ್ಲಿದ್ದಾರೆ. ಹೀಗಾಗಿ ಇಂದು ಪತ್ರಿಕೋದ್ಯಮ ಎತ್ತರಕ್ಕೆ ಬೆಳೆದು ನಿಂತಿದೆ. ಡಾ. ಪ್ರಭಾಕರ ಕೋರೆ ಕೆಎಲ್ಇ ಸಂಸ್ಥೆ ಕಾರ್ಯಾಧ್ಯಕ್ಷ ಬೆಳಗಾವಿಯಲ್ಲಿ ಪತ್ರಕರ್ತರ ಸಂದಿಂದ ನಡೆದ ಸಮಾರಂಭದಲ್ಲಿ ಸಾಧನಗೈದ ಪತ್ರಕರ್ತ ಮಕ್ಕಳನ್ನು ಪುರಸ್ಕರಿಸಲಾಯಿತು. ಡಾ. ಪ್ರಭಾಕರ ಕೋರೆ, ಆಸೀಫ್ ಸೇಠ, ಭೂಷನ್ ಬೋರಸೆ, ಮಂಗೇಶ ಪವಾರ, ಇತರರಿದ್ದರು.ೆ ಕೆಲವೊಂದು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ವ್ಯಸನ ಹಚ್ಚುವ ಸಮಾಜಘಾತುಕ ಶಕ್ತಿಗಳು ಹೆಚ್ಚಾಗಿವೆ. ಅಂತಹವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ತಂದೆ&ತಾಯಿ ಕಣ್ಣಲ್ಲಿ ನೀರು ಬರದಂತೆ ನಡೆದುಕೊಳ್ಳಬೇಕು. ಅಭಯ ಪಾಟೀಲ ಶಾಸಕ