ವಿಜಯಪುರದಲ್ಲಿ ಸ್ವಾಮಿ ಧರ್ಮಾರ್ಥ ಎಕ್ಸ್​ ರೇ ಮತ್ತು ಡಯಗ್ನೋಸ್ಟಿಕ್​ ಲ್ಯಾಬೋರೇಟರಿಯ ಉದ್ಘಾಟನೆಯನ್ನು ನೇತ್ರ ತ ಡಾ. ಪ್ರಭುಗೌಡ ಬ. ಲಿಂಗದಳ್ಳಿ (ಚಬನೂರ) ಅವರು ನೆರವೇರಿಸಿದರು. ಗುರು ಗಚ್ಚಿನಮಠ, ಸಿದ್ದಲಿಂಗ ಸ್ವಾಮೀಜಿ ಮಮತ್ತಿತರರಿದ್ದಾರೆ. 
ಜಿಲ್ಲೆ

ಹೊಸಮಠ ಪರಿವಾರದ ಕಾರ್ಯ ಶ್ಲಾನೀಯ

ಗಿರೀಶ ಸಗರ

ವಿಜಯಪುರ : ನಗರದ ಅಥಣಿ ರಸ್ತೆಯಲ್ಲಿರುವ ಸೈನಿಕ್​ ಸ್ಕೂಲ್​ ಎರಡನೇ ಗೇಟ್​ ಬಳಿಯ ಸ್ವಾಮಿ ಧರ್ಮಾರ್ಥ ಎಕ್ಸ್​ ರೇ ಮತ್ತು ಡಯಗ್ನೋಸ್ಟಿಕ್​ ಲ್ಯಾಬೋರೇಟರಿಯ ಉದ್ಘಾಟನೆಯನ್ನು ಭಾನುವಾರ ಖ್ಯಾತ ನೇತ್ರ ತ ಡಾ. ಪ್ರಭುಗೌಡ ಬ. ಲಿಂಗದಳ್ಳಿ (ಚಬನೂರ) ನೆರವೇರಿಸಿದರು.

ನಂತರ ಮಾತನಾಡಿದ ಡಾ. ಪ್ರಭುಗೌಡ ಬ. ಲಿಂಗದಳ್ಳಿ (ಚಬನೂರ), ಶ್ರೀ ಸದ್ಗುರು ಸದಾನಂದ ಸ್ವಾಮಿ ಹಾಗೂ ಗಿರಿಜಾಮಾತಾ ಅವರ ಹೆಸರಿನಲ್ಲಿ ಹೊಸಮಠ ಪರಿವಾರದವರು ಮಾಡಿರುವ ಈ ಕಾರ್ಯ ನಿಜಕ್ಕೂ ಶ್ಲಾನೀಯ ಎಂದರು.

ನೇತ್ರ ತೆ ಡಾ. ಮಾಲಿನಿ ಪ್ರಭುಗೌಡ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿ ಶ್ರೀ ಸಿದ್ಧೇಶ್ವರ ಸಹಕಾರಿ ಬ್ಯಾಂಕಿನ ನಿರ್ದೇಶಕ ಗುರು ಗಚ್ಚಿನಮಠ ಮಾತನಾಡಿ, ಹೊಸಮಠ ಸಹೋದರರ ಸಮಾಜಮುಖಿ ಕೆಲಸಗಳು, ಬಡವರಿಗಾಗಿ ಅತ್ಯಂತ ಕಡಿಮೆ ಮತ್ತು ರಿಯಾಯಿತಿ ದರಗಳಲ್ಲಿ ಎಕ್ಸ್​ ರೇ ಹಾಗೂ ರಕ್ತ ತಪಾಸಣೆ ಸೇವೆ ನೀಡುವ ಈ ಯೋಜನೆ ಕುರಿತು ಹರ್ಷ ವ್ಯಕ್ತಪಡಿಸಿದರು.

ಬಸವನ ಬಾಗೇವಾಡಿಯ ವಿರಕ್ತ ಮಠದ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಖ್ಯಾ ಶಸೆ ಉರ್ಮಿಳಾ ಹೊಸಮಠ, ನೇತ್ರಾ ಹೊಸಮಠ ಮತ್ತಿತರರಿದ್ದರು.