ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ ಸಹಕಾರಿ ಕ್ಷೇತ್ರಗಳ ಉತ್ಕೃಷ್ಟ ಸೇವೆಗೆ ಜ್ಞಾನ ತೃಷೆ ಮತ್ತು ಅನ್ನ ತೃಷೆ ಮುಖ್ಯವಾಗಿದೆ. ಆಧ್ಯಾತ್ಮಿಕ ಸಂಪತ್ತಿನ ಜತೆಗೆ ಮಿತಹಿತದಿಂದ ಸ್ವಾವಲಂಬಿಯಾಗಿ ಬದುಕಲು ಕಲಿಸಿದ ವಿಶ್ವದ ಏಕೈಕ ದೇಶ ಭಾರತ. ರಾಷ್ಟ್ರೀಕೃತ ಬ್ಯಾಂಕುಗಳು ಕೇವಲ ವ್ಯವಹಾರಕ್ಕೆ ಸೀಮಿತವಾಗಿದ್ದು, ಬದುಕಿನ ಭರವಸೆ ತುಂಬಿಸುವ ಕೆಲಸವನ್ನು ಸಹಕಾರಿ ಸಂಘಗಳು ಮಾಡುತ್ತಿವೆ.ಅಗತ್ಯಕ್ಕೆ ಸಾಲ ಪಡೆಯುವುದು ತಪ್ಪಲ್ಲ. ಆದರೆ ಅದರ ಉದ್ದೇಶ ಸ್ಪಷ್ಟವಾಗಿರಲಿ ಎಂದು ಕಾವೂರು ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ ಹೇಳಿದರು. ಸೋಮವಾರ ಶ್ರೀ ಕಾಲಬೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಇಂದಬೆಟ್ಟು ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು. ಶ್ರೀ ಕಾಲಬೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ರಂಜನ್ ಜಿ.ಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಭಾಗದ ಬಡವರ, ರೈತಾಪಿ ವರ್ಗದವರಿಗೆ ಬ್ಯಾಂಕಿನ ಸಕಲ ಸೌಲಭ್ಯಗಳು ದೊರೆಯುವಂತಾಗಬೇಕು ಎಂಬ ಸದುದ್ದೇಶದಿಂದ ಇಂದಬೆಟ್ಟುವಿನಲ್ಲಿ ಮೂರನೇ ಶಾಖೆಯನ್ನು ಪ್ರಾರಂಭಿಸಲಾಗಿದೆ ಎಂದರು. ಗಣಕಯಂತ್ರ ಉದ್ಘಾಟನೆಯನ್ನು ಬೆಳ್ತಂಗಡಿ ಪ್ರಸನ್ನ ಶಿಕ್ಷಣ ಸಂಸ್ಥೆ ಅಧ್ಯಕ್ಷ, ಮಾಜಿ ಸಚಿವ ಕೆ.ಗಂಗಾಧರ ಗೌಡ ನೆರವೇರಿಸಿದರು ಮಾಜಿ ಶಾಸಕ ಸಂಜೀವ ಗೌಡ ಮಠಂದೂರು ಭದ್ರತಾ ಕೊಠಡಿ ಉದ್ಘಾಟಿಸಿದರು. ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಅಧ್ಯಕ್ಷ ಬಾಲಕೃಷ್ಣ ಗೌಡ ಕೇರಿಮಾರು, ದ.ಕ.ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘದ ಅಧ್ಯಕ್ಷ ಡಿ.ಬಿ ಬಾಲಕೃಷ್ಣ ಗೌಡ, ದ.ಕ.ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘದ ಉಪಾಧ್ಯಕ್ಷ ಭಾಸ್ಕರ ಗೌಡ ದೇವಸ್ಯ, ಗೌರಿ ಬನ್ನೂರು, ಸೂರಜ್ ಗೌಡ ವಳಂಬ್ರ, ದಾಮೋದರ ಗೌಡ ಸುರುಳಿ, ಸೌಮ್ಯಲತಾ ಜಯಂತ ಗೌಡ, ಮೋಹನ್ ಗೌಡ ಕಲ್ಮಂಜ, ಶ್ರೀನಿವಾಸ ಗೌಡ ಬೆಳಾಲು, ಆಶಾಲತಾ ಗುಡಿಗಾರ್, ಹರೀಶ್ ಸಾಲ್ಯಾನ್ ಮೋರ್ತಾಜೆ, ಆನಂದ ಗೌಡ ಬರೆಮೇಲು, ವಿಜಯ್ ಬಿ.ಎಸ್., ಸೀತಾರಾಮ ಗೌಡ ಹಾರ್ತಾಜೆ, ಆನಂದ ಗೌಡ ಮೈರ್ನೋಡಿ, ನೋಣಯ್ಯ ಗೌಡ, ದೇಜಪ್ಪ ಗೌಡ, ವಾಮನ ಗೌಡ ಕೊಯಮಜಲು, ಬಾಲಕೃಷ್ಣ ಗೌಡ ಶೀತಲಡ್ಡ, ಜಯಂತ ಗೌಡ ನರ್ನೊಟ್ಟು, ರಾಜೇಂದ್ರ ಗೌಡ ಕುಕ್ಕಿಮಾರ್, ಶೈಲೇಶ್ ಗೌಡ ಮನ್ನಡ್ಕ, ವಿಶ್ವೇಶ್ ಗೌಡ ಡೆಮ್ಮೆಜಾಲು ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಶಿವಕಾಂತ ಗೌಡ, ಮುಖ್ಯಕಾರ್ಯನಿರ್ವಹಣಾಧಿಕಾರಿ ದಿನೇಶ್ ಗೌಡ ಕಲ್ಲಾಜೆ, ನಿರ್ದೇಶಕರುಗಳಾದ ಲಕ್ಷ್ಮಣ ಗೌಡ, ಬಾಲಕೃಷ್ಣ ಗೌಡ ಕೇರಿಮಾರ್, ದಾಮೋದರ ಗೌಡ ಸುರುಳಿ, ಜಯಂತ ಗೌಡ ಗುರಿಪಳ್ಳ, ಸುಂದರ ಗೌಡ ಪುಡ್ಕೆತ್ತು, ಕೃಷ್ಣಪ್ಪ ಗೌಡ ಬೇಂಗಳ, ಧರ್ಮರಾಜ ಗೌಡ ಅಡ್ಕಾಡಿ, ಜಯಂತ ಗೌಡ ಓಣಿಯಾಲು, ಭರತ್ ಗೌಡ ಹಾನಿಬೆಟ್ಟು, ಕೆ.ಸಂಜೀವ ಗೌಡ ಪಾಂಚಜನ್ಯ, ಸರೋಜಿನಿ ವಿಜಯ ಕುಮಾರ್, ಡಿ.ಚೇತನಾ ಚಂದ್ರಶೇಖರ ಗೌಡ, ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಯುವ ವೇದಿಕೆ ಅಧ್ಯಕ್ಷ ಅನಿಲ್ ಗೌಡ ಅಂತರ, ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಮಹಿಳಾ ವೇದಿಕೆ ಅಧ್ಯಕ್ಷೆ ಅಪರ್ಣಾ ಶಿವಕಾಂತ ಗೌಡ, ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಯುವ ಮಹಿಳಾ ವೇದಿಕೆ ಅಧ್ಯಕ್ಷೆ ಅನುಪಮಾ ಸತೀಶ್ ಗೌಡ ಸಹಕರಿಸಿದರು. ಮಮತಾ ಶಿವರಾಮ ಗೌಡ, ಭವ್ಯ ಸುರೇಂದ್ರ ಗೌಡ ಪ್ರಾರ್ಥನೆ ಹಾಡಿದರು, ಸಂಘದ ಅಧ್ಯಕ್ಷ ರಂಜನ್ ಜಿ.ಗೌಡ ಸ್ವಾಗತಿಸಿದರು,ಪಂ.ಅ.ಅಧಿಕಾರಿ ಗಾಯತ್ರಿ ದಿನೇಶ್, ಸರೋಜಿನಿ ವಿಜಯ್ ಕುಮಾರ್ ನಿರೂಪಿಸಿ, ಭರತ್ ಗೌಡ ಹಾನಿಬೆಟ್ಟು ವಂದಿಸಿದರು.
ಸಹಕಾರಿ ಸಂಘಗಳಿಂದ ಸಮಾಜದ ಏಳಿಗೆಯಾಗುತ್ತಿದ್ದು ಗ್ರಾಹಕರಿಗೆ ಉತ್ತಮ ಸೇವೆ ಕಲ್ಪಿಸುತ್ತಿದೆ. ಜಿಲ್ಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ಸಹಕಾರಿ ಸಂಘಗಳಿಗೆ ಸರಿಸಾಟಿಯಿಲ್ಲ. ಆಳಾಗಿ ಬದುಕುವ ಬದಲು ಅರಸನಾಗಿ ಬದುಕಬೇಕೆಂಬ ಛಲ ಯುವಕರಿಗೆ ಬೇಕು. ಸ್ವಾವಲಂಬನೆಗೆ ಒತ್ತು ನೀಡಿ ನಾಲ್ಕಾರು ಜನರಿಗೆ ಉದ್ಯೋಗ ಒದಗಿಸಿ ಬದುಕು ಕಟ್ಟಿಕೊಳ್ಳಬೇಕು. ಸಂಜೀವ ಗೌಡ ಮಠಂದೂರು, ಪುತ್ತೂರು ಮಾಜಿ ಶಾಸಕ