ಇಳಕಲ್ಲದ ಕನ್ನಡ ಶಿಶುವಿಹಾರ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ 43ನೇ ವಾರ್ಷಿಕ ಸ್ನೇಹ ಸಮ್ನೇಳನವನ್ನು ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ ಉದ್ಘಾಟಿಸಿದರು. ರಾಘವೇಂದ್ರ ಚಿಂಚಮಿ, ಲಲಿತಾಬಾಯಿ ಸಪ್ಪರದ, ಮಲ್ಲಿಕಾರ್ಜುನ ಇಂದರಗಿ, ಸದಾಶಿವ ಗುಡಗುಂಟಿ, ಮಂಜುನಾಥ ಬಾವೂರ, ನಾಗರಾಜ ಹೊಸೂರ ಇದ್ದಾರೆ. 
ಜಿಲ್ಲೆ

ಗಾಯತ್ರಿ ಮಹಿಳಾ ಸಂಘದ ಕಾರ್ಯ ಶ್ಲಾಘನೀಯ

ಇಳಕಲ್ಲ(ಗ್ರಾ): ಸುಸಂಸ್ಕೃತ ಮಕ್ಕಳು ಭಾರತದ ನಕ್ಷತ್ರಗಳು ಎಂಬ ಧ್ಯೇಯೋದ್ದೇಶದೊಂದಿಗೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ ಹೇಳಿದರು.

ನಗರದ ಗಾಯತ್ರಿ ಮಹಿಳಾ ಸಂಘದ ಕನ್ನಡ ಶಿಶುವಿಹಾರ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ 43ನೇ ವಾರ್ಷಿಕ ಸ್ನೇಹ ಸಮ್ನೇಳನ ಹಾಗೂ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ನಗರಸಭೆ ಯೋಜನಾ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಚಿಂಚಮಿ ಮಾತನಾಡಿ, ಕನ್ನಡ ಮಾಧ್ಯಮ ಶಾಲೆಯಾಗಿ ನಗರದಲ್ಲಿ ಒಳ್ಳೆಯ ಹೆಸರನ್ನು ಪಡೆದಿರುವ ಶಾಲೆಯು ಇನ್ನಷ್ಟು ಉನ್ನತಿಗಳಿಸಲಿ ಎಂದು ಶುಭ ಕೋರಿದರು.

ಕ್ಷೇತ್ರ ಸಮನ್ವಯಾಧಿಕಾರಿ ಸದಾಶಿವ ಗುಡಗುಂಟಿ, ಭಾರತೀಯ ಸೇನೆಯ ನಿವೃತ್ತ ಹವಾಲ್ದಾರ್ ಮಂಜುನಾಥ ಬಾವೂರ ಮಾತನಾಡಿದರು.

ಸಾಧಕ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು. ನಾಗರಾಜ ಹೊಸುರ, ಶಿಕ್ಷಕಿ ಲಕ್ಷ್ಮೀ ಪುರೋಹಿತ, ಆದರ್ಶ ವಿದ್ಯಾರ್ಥಿನಿ ಗೌತಮಿ ಗದಗಿನಮಠ, ಆದರ್ಶ ವಿದ್ಯಾರ್ಥಿ ಮದನ ಗೋಟುರ ಹಾಗೂ ವಿದ್ಯಾರ್ಥಿನಿ ಸೃಷ್ಟಿ ಬಿಂಗಿ ಅವರನ್ನು ಸನ್ಮಾನಿಸಲಾಯಿತು.

ಲಲಿತಾಬಾಯಿ ಸಪ್ಪರದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕ ಮಲ್ಲಿಕಾರ್ಜುನ ಇಂದರಗಿ ಸ್ವಾಗತಿಸಿದರು. ಆಡಳಿತಾಧಿಕಾರಿ ಟಿ.ಎಂ. ರಾಮದುರ್ಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಕ್ಷ್ಮೀ ಪುರೋಹಿತ ವಾರ್ಷಿಕ ವರದಿ ವಾಚಿಸಿದರು. ಎಂ.ಎಸ್ ಕನ್ನೂರ ವಂದಿಸಿದರು. ವೇದಾ ದಟ್ಟಿ ನಿರೂಪಿಸಿದರು.