ಜಿಲ್ಲೆ

ಧರ್ಮಸ್ಥಳ ಸಂಘದ ಕಾರ್ಯ ಶ್ಲಾಘನೀಯ

ಬಸವರಾಜ ವೀರಪ್ಪ ಗರಗ

ಉಪ್ಪಿನಬೆಟಗೇರಿ: ನಿರಾಶ್ರಿತರಿಗೆ ಆಶ್ರಯ ನೀಡಿ ಬದುಕು ಕಟ್ಟಿ ಕೊಡುವ ಮಹತ್ತರ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಎಂದು ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯೆ ಸವಿತಾ ಅಮರಶೆಟ್ಟಿ ಹೇಳಿದರು.

ಸಮೀಪದ ಕಲ್ಲೂರ ಗ್ರಾಮದ ಶ್ರೀ ಶರಣ ಬಸವೇಶ್ವರ ದೇವಸ್ಥಾನದ ಬಳಿ ನಿರಾಶ್ರಿತ ವೃದ್ಧ ಮಹಿಳೆ ಹನುಮವ್ವ ಪೂಜಾರ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯಿಂದ ವಾತ್ಸಲ್ಯ ಯೋಜನೆಯಡಿ ನಿರ್ವಿುಸಲಾದ ನೂತನ ಮನೆಯನ್ನು ಗುರುವಾರ ಹಸ್ತಾಂತರಿಸಿ ಅವರು ಮಾತನಾಡಿದರು.

ಧಾರವಾಡ ತಾಲೂಕು ಯೋಜನಾಧಿಕಾರಿ ಅಶೋಕ ಕೆ. ಮಾತನಾಡಿ, ದುಡಿಯಲು ಆಗದ ಹಾಗೂ ಆಶ್ರಯವಿಲ್ಲದ ವೃದ್ಧರಿಗೆ ಧಗ್ರಾಯೋದಿಂದ 1.14 ಲಕ್ಷ ರೂ. ವೆಚ್ಚದಲ್ಲಿ ನೂತನ ಮನೆ ನಿರ್ವಿುಸಿಕೊಡಲಾಗುತ್ತಿದೆ. ಪ್ರತಿ ತಿಂಗಳು 1000 ರೂ. ಮಾಶಾಸನ, ವಾತ್ಸಲ್ಯ ಕಿಟ್​ನಡಿ ಬಟ್ಟೆ, ಹಾಸಿಗೆ, ಚಾಪೆ, ಸೋಪು ಹಾಗೂ ಪಾತ್ರೆಗಳು ಮತ್ತು ಪೌಷ್ಟಿಕಾಂಶವುಳ್ಳ ಆಹಾರ ಪೌಡರ್ ನೀಡಲಾಗುತ್ತಿದ್ದು, ಇದರ ಪ್ರಯೋಜನ ಪಡೆದುಕೊಂಡು ಸುಂದರ ಜೀವನ ನಡೆಸಬೇಕು ಎಂದರು.

ಜ್ಞಾನವಿಕಾಸ ಸಮನ್ವಯಾಧಿಕಾರಿ ಸವಿತಾ ಪಾಟೀಲ ಮಾತನಾಡಿ, ವಾಸಕ್ಕೆ ಮನೆ ಇಲ್ಲದವರು ಅಥವಾ ಮನೆ ಇದ್ದೂ ರಿಪೇರಿ ಮಾಡಿಸಲಾಗದ ಪರಿಸ್ಥಿತಿಯಲ್ಲಿರುವ ಬಡ ಕುಟುಂಬಸ್ಥರಿಗೆ ವಾತ್ಸಲ್ಯ ಕಾರ್ಯಕ್ರಮದಡಿ ಮನೆ ದುರಸ್ತಿ ಇಲ್ಲವೆ, ಹೊಸ ಮನೆ ನಿರ್ವಿುಸಿಕೊಡಲಾಗುತ್ತಿದೆ ಎಂದರು.

ಉಪ್ಪಿನಬೆಟಗೇರಿ ಗ್ರಾಪಂ ಅಧ್ಯಕ್ಷ ಬಸೀರಅಹ್ಮದ್ ಮಾಳಗಿಮನಿ, ಸದಸ್ಯ ಮಹಾವೀರ ಅಷ್ಟಗಿ, ಕೊಟಬಾಗಿ ಗ್ರಾಪಂ ಸದಸ್ಯ ಅಜ್ಜಪ್ಪ ದಂಡಿನ, ಮಲ್ಲಿಕಾರ್ಜುನ ಅಗಸಿಮನಿ, ಪರಮೇಶ್ವರ ಹಡಪದ, ಸಂಗಪ್ಪ ದಂಡಿನ, ಚಂದ್ರಯ್ಯ ಚಿಕ್ಕಮಠ, ಉಡಚಪ್ಪ ಇಂಚಲ, ಸವಿತಾ ಮಸೂತಿ, ಪ್ರೇಮಾ ಬಾರಕಿ, ಮಮತಾಜ್ ಲಾಡಮ್ಮನವರ, ವಲಯ ಮೇಲ್ವಿಚಾರಕಿ ಪಲ್ಲವಿ ಶೆಟ್ಟಿ, ಸೇವಾ ಪ್ರತಿನಿಧಿ ವೀಣಾ ದೊಡಮನಿ, ಸವಿತಾ ಟಗರಿ, ಒಕ್ಕೂಟ ಪದಾಧಿಕಾರಿಗಳು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.