ಇಂಡಿ: ಸರ್ಕಾರಗಳು ಮಾಡಲು ಸಾಧ್ಯವಾಗದ ಕೆಲಸಗಳನ್ನು ಧರ್ಮಸ್ಥಳ ಸಂಸ್ಥೆ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಕಂದಾಯ ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಹೇಳಿದರು.
ಪಟ್ಟಣದ ಧರ್ಮಸ್ತಳ ಕ್ಷೇಮಾಭಿವೃದ್ಧಿ ಸಂಸ್ಥೆ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಅರ್ಹರಿಗೆ ಮಂಜೂರಾದ ಮಾಶಾಸನ ಪತ್ರ, ವೀಲ್ ಚೇರ ಮತ್ತು ವಾಕಿಂಗ್ ಸ್ಟಿಕ್ ವಿತರಿಸಿ ಅವರು ಮಾತನಾಡಿದರು.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘವು ಕೇವಲ ಸಾಲ ಕೊಡುವುದಷ್ಟೇಯಲ್ಲದೆ, ನೂರಾರು ಜನೋಪಯೋಗಿ ಯೋಜನೆಗಳನ್ನು ಕೈಗೊಂಡು ಗ್ರಾಮೀಣ ಭಾಗದ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು.
ಜೆಡಿಎಸ್ ಪ್ರಮುಖ ಬಿ.ಡಿ. ಪಾಟೀಲ ಮಾತನಾಡಿದರು.
ಸಂಸ್ಥೆ ಯೋಜನಾಧಿಕಾರಿ ನಟರಾಜ ಕಾರ್ಯಕ್ರಮಗಳ ಮಾಹಿತಿ ನೀಡಿದರು.
ಸಿದ್ದು ಡಂಗಾ, ಪ್ರಕಾಶ ಬಿರಾದಾರ, ವಲಯ ಮೇಲ್ವಿಚಾರಕ ಶಾರುಖ, ಒಕ್ಕೂಟದ ಅಧ್ಯಕ್ಷರು ಸೇವಾ ಪ್ರತಿನಿಧಿಗಳು ಇದ್ದರು.
ಲಾನುಭವಿಗಳಾದ ಪಾರ್ವತಿ ನಾಗರಹಳ್ಳಿ, ಬಸಲಿಂಗವ್ವ ಪಾಟೀಲ, ಯಲ್ಲವ್ವ ಕೊತರ, ಶಂಕ್ರಪ್ಪ ಸಿದ್ದಪ್ಪ, ಚಂದ್ರಶೇಖರ ತಿಪ್ಪಣ್ಣ, ಸವಿತಾ ಸಂಗಪ್ಪ ಅವರಿಗೆ ವೀಲ್ ಚೇರ್, ವಾಕಿಂಗ್ ಸ್ಟಿಕ್ ಮತ್ತು ಮಾಶಾಸನ ಪತ್ರ ವಿತರಿಸಲಾಯಿತು.