ಸವದತ್ತಿ: ನಾಗರಿಕರ ಆರೋಗ್ಯ ಮತ್ತು ಸ್ವಚ್ಛತೆಗೆ ಗಮನ ಕೊಟ್ಟು ಕೆಲಸ ನಿರ್ವಹಿಸುತ್ತಿರುವ ಪೌರಕಾರ್ಮಿಕರ ಕಾರ್ಯ ನಿಜಕ್ಕೂ ಶ್ಲಾನೀಯ ಎಂದು ಕಾಂಗ್ರೆಸ್ ಮುಖಂಡ ಅಶ್ವತ್ಥ ವೈದ್ಯ ಹೇಳಿದರು.
ಇಲ್ಲಿನ ಪುರಸಭೆ ಸಭಾಂಗಣದಲ್ಲಿ ಮಂಗಳವಾರ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪೌರಕಾರ್ಮಿಕರನ್ನು ಗೌರವಿಸುವುದು ಜನಮೆಚ್ಚುವ ಕಾರ್ಯವಾಗಿದೆ. ದಿನನಿತ್ಯ ನಗರವನ್ನು ಸ್ವಚ್ಛವಾಗಿಟ್ಟು, ನಾಗರಿಕರ ಆರೋಗ್ಯ ಕಾಪಾಡುವ ಕೆಲಸ ಮಾಡುತ್ತಾರೆ. ಪೌರಕಾರ್ಮಿಕರು ಮಕ್ಕಳಿಗೆ ಉತ್ತಮ ಶಿಣ ನೀಡಿ ಭವಿಷ್ಯ ರೂಪಿಸಬೇಕು ಎಂದರು.
ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಮಾತನಾಡಿ, ಪೌರಕಾರ್ಮಿಕರು ಮುಂಜಾಗ್ರತಾ ಕ್ರಮ ಕೈಗೊಂಡು ಸ್ವಚ್ಛತೆ ಮಾಡುವ ಜತೆಗೆ ಆರೋಗ್ಯದ ಕಡೆಗೂ ಹೆಚ್ಚು ಗಮನಹರಿಸಬೇಕು ಎಂದರು. ಸಮಾಜ ಕಲ್ಯಾಣಾಧಿಕಾರಿ
ಆರ್.ಆರ್.ಕುಲಕರ್ಣಿ ಮಾತನಾಡಿ, ಪೌರಕಾರ್ಮಿಕರಿಗೆ ಆರ್ಥಿಕ ಸೌಲಭ್ಯಕ್ಕಾಗಿ ಸಹಾಯಧನ, ಮಕ್ಕಳ ಶಿಕ್ಷಣಕ್ಕಾಗಿ ಸಾಕಷ್ಟು ಸೌಲಭ್ಯಗಳಿದ್ದು, ಸದುಪಯೋಗ ಪಡೆಯಬೇಕು. ಮಕ್ಕಳನ್ನು ಮುಖ್ಯವಾಹಿನಿಗೆ ತರಬೇಕು ಎಂದರು.
ಪುರಸಭೆಯಿಂದ ಆಯೋಜಿಸಿದ್ದ ಕ್ರೀಡೆಗಳಲ್ಲಿ ವಿಜೇತ ಪೌರಕಾರ್ಮಿಕರಿಗೆ ಪ್ರಥಮ, ದ್ವೀತಿಯ ಹಾಗೂ ತತೀಯ ಬಹುಮಾನ ವಿತರಿಸಲಾಯಿತು. ಪುರಸಭೆ ಮುಖ್ಯಾಧಿಕಾರಿ ಸಂಗನಬಸಯ್ಯ ಗದಗಿಮಠ, ಆರೋಗ್ಯಾಧಿಕಾರಿ ಶ್ರೀಪಾದ ಸಬನೀಸ್, ಪುರಸಭೆ ಅಧ್ಯೆಕ್ಪ ಚನ್ನವ್ವ ಹುಚ್ಚಣ್ಣವರ, ಗ್ಯಾರಂಟಿ ಯೋಜನೆ ಅಧ್ಯ ಶಿವಕುಮಾರ ರಾಥೋಡ, ಪುರಸಭೆ ಜೆಇ ಶಂಕರ ದಂಡಿನ, ಮಂಜುನಾಥ ಪಾಚಂಗಿ, ಬಸವರಾಜ ಪ್ರಭುನವರ, ಯೋಜನಾಧಿಕಾರಿ ಎಸ್.ವೈ.ಹಾದಿಮನಿ, ಬಸವರಾಜ ತಳವಾರ, ಪುರಸಭೆ ಸದಸ್ಯರಾದ ಅರ್ಜುನ ಆಮೋಜಿ, ಪ್ರವಿಣ ಮುನವಳ್ಳಿ ಹಾಗೂ ಇತರರಿದ್ದರು.