ರಾಯಚೂರು ನಗರದಲ್ಲಿ ಬಿಡಾಡಿ ದನಗಳು ಹಾವಳಿ ಹೆಚ್ಚಿದ್ದರಿಂದ ಮಹಾನಗರ ಪಾಲಿಕೆ ಸಿಬ್ಬಂದಿಗಳು ಶನಿವಾರ ತಡರಾತ್ರಿಯಿಂದ ಬಿಡಾಡಿ ದನಗಳ ಹಿಡಿಯುವ ಕಾರ್ಯಾಚರಣೆಯನ್ನು ಆರಂಭಿಸಿದರು.
ಮಹಾನಗರ ಪಾಲಿಕೆ ಸಿಬ್ಬಂದಿಗಳು ರಾತ್ರಿಯಿಡಿ ನಡೆಸಿದ ಕಾರ್ಯಾಚರಣೆಯಲ್ಲಿ ಸುಮಾರು 60ರಿಂದ 70 ಬಿಡಾಡಿ ದನಗಳನ್ನು ಹಿಡಿದಿದ್ದು, ನಗರದ ಹಿಂದಿ ವರ್ಧಮಾ ಆವರಣದಲ್ಲಿ ಕೂಡಿ ಹಾಕಲಾಗಿದ್ದು, ಸುಮಾರು 28 ದನಗಳನ್ನು ಗೋಶಾಲೆಗೆ ಸಾಗಿಸಲಾಗಿದೆ.
ನಗರದ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಬಿಡಾಡಿ ದನಗಳು ಮಲಗಿ ಸಂಚಾರಕ್ಕೆ ತೊಂದರೆ ಮಾಡುತ್ತಿದ್ದು, ಹಲವು ಕಡೆ ಅಪಘಾತಗಳು ಸಂಭವಿಸಿ ಸವಾರರು ಗಾಯಗೊಂಡ ಘಟನೆಗಳು ನಡೆದಿದ್ದರಿಂದ ಮಹಾನಗರ ಪಾಲಿಕೆ ಆಯುಕ್ತನ ಜುಬೆನ್ ಮೊಹಾಪಾತ್ರರ ಸೂಚನೆ ಮೇರೆಗೆ ಸಿಬ್ಬಂಧಿಗಳು ಕಾರ್ಯಾಚರಣೆ ನಡೆಸಿದ್ದಾರೆ.