ಮೈಸೂರು: ಮೈಸೂರು ವೈದ್ಯಕೀಯ ಕಾಲೇಜು ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ಜೆ.ಕೆ. ಮೈದಾನದ ಆವರಣದಲ್ಲಿರುವ ಸಭಾಂಗಣದಲ್ಲಿ ಆಯೋಜಿಸಿರುವ ‘ಸಂಸ್ಕೃತಿ-22’ ಕಾರ್ಯಕ್ರಮಕ್ಕೆ ಶುಕ್ರವಾರ ನಟ ಶಿವರಾಜ್‌ಕುಮಾರ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಡಾಕ್ಟರ್ ಎಂಬ ಪದ ನಮ್ಮ ಕುಟುಂಬದೊಂದಿಗೆ ಸೇರಿ ಹೋಗಿದೆ. ನಮ್ಮ ಮನೆಯಲ್ಲಿ ಸಾಕಷ್ಟು ಡಾಕ್ಟರ್ ಇದ್ದಾರೆ. ನನ್ನ ಮಗಳು ಮೈಸೂರಿನಲ್ಲಿಯೇ ಎಂಬಿಬಿಎಸ್ ಪದವಿ ಪಡೆದಿದ್ದಾಳೆ. ತಂದೆಗೆ ಗೌರವ ಡಾಕ್ಟರೇಟ್ ಪದವಿ ದೊರೆತಿದೆ ಎಂದರು. ಕೆಲ ಚಲನಚಿತ್ರ ಗೀತೆಗಳನ್ನು ಹಾಡುವುದಲ್ಲದೇ ನೃತ್ಯದ ಮೂಲಕ ನೆರೆದಿದ್ದವರನ್ನು ರಂಜಿಸಿದರು. ಮಾತ್ರವಲ್ಲದೇ ಕೆಲವು ಚಿತ್ರಗಳ ಡೈಲಾಗ್ ಹೇಳಿ ಗಮನ ಸೆಳೆದರು.
ಮೈಸೂರು ಎಂದರೆ ಅಪ್ಪನಿಗೆ ಅಚ್ಚು ಮೆಚ್ಚು. ಇಲ್ಲಿನ ಕಾಫಿ, ಬಿರಿಯಾನಿ ಇಷ್ಟ. ಇಲ್ಲಿನ ವಾತಾವರಣ ಚೆನ್ನಾಗಿದೆ. ಎಲ್ಲರೂ ಆರಾಮವಾಗಿ ಜೀವನ ನಡೆಸಲು ಸಾಧ್ಯವಿದೆ. ತಂದೆ ಪದ್ಮವಿಭೂಷಣ ಪ್ರಶಸ್ತಿ ಪಡೆದ ಸಂದರ್ಭದಲ್ಲಿ ಇದೇ ಸಭಾಂಗಣದಲ್ಲಿ ಅಭಿನಂದನ ಸಮಾರಂಭ ಆಯೋಜಿಸಲಾಗಿತ್ತು ಎಂದು ನೆನೆದರು.
ಎಂಎಂಸಿ ಆ್ಯಂಡ್ ಆರ್‌ಐ ಡೀನ್ ಮತ್ತು ಆಂಡ್ ಡೈರೆಕ್ಟರ್ ದಾಕ್ಷಾಯಿಣಿ, ಡಾ.ಬಿ.ಎಲ್.ನಂಜುಂಡಸ್ವಾಮಿ ಸಂಸ್ಥೆ ಕೌನ್ಸಿಲ್ ಸದಸ್ಯರಾದ ಡಾ.ಎಂ.ಎ.ಶೇಖರ್, ಡಾ.ಎ.ಎಚ್.ಹರೀಶ್, ಹೇಮಾ ನಂದೀಶ್ ಹಾಗೂ ಡಾ.ಬಿ.ಎಲ್.ನಂಜುಂಡಸ್ವಾಮಿ ಇದ್ದರು.