ಜಿಲ್ಲೆ

ನೋಡನೋಡುತ್ತಿದ್ದಂತೆ ಕಾಳಿ ನದಿಗೆ ಹಾರಿದ ಮಹಿಳೆ, ಪೊಲೀಸರಿಂದ ತಡರಾತ್ರಿವರೆಗೂ ಶೋಧ

ದಾಂಡೇಲಿ ಇಲ್ಲಿಯ ಕಾಳಿ ನದಿಯ ಕುಳಗಿ ಸೇತುವೆ ಮೇಲಿಂದ ಮಹಿಳೆಯೊಬ್ಬರು ನದಿಗೆ ಹಾರಿದ ಘಟನೆ ಗುರುವಾರ ನಡೆದಿದೆ.

ಕೋಗಿಲಬನದ ರಸ್ತೆಯ ಮತ್ತು ಸೇತುವೆ ಅಕ್ಕಪಕ್ಕ ಮಹಿಳೆ ಅಲೆದಾಡುತ್ತಿರುವುದನ್ನು ಸ್ಥಳೀಯರು ಕಂಡಿದ್ದಾರೆ. ಏಕಾಏಕಿ ಮಹಿಳೆ ನದಿಗೆ ಹಾರಿದ್ದಾಳೆ. ತಕ್ಷಣವೇ ಮಹಿಳೆಯನ್ನು ರಕ್ಷಿಸಲು ಸ್ಥಳೀಯರು ಪ್ರಯತ್ನಿಸಿದ್ದಾರೆ. ಆದರೆ, ನೀರಿನ ಹರಿವು ವೇಗವಾಗಿದ್ದರಿಂದ ಮಹಿಳೆ ತೇಲಿ ಹೋಗಿರುವ ಶಂಕೆ ಉಂಟಾಗಿದೆ.

ಘಟನೆ ತಿಳಿಯುತ್ತಿದ್ದಂತೆ ನಗರ ಠಾಣೆಯ ಪೊಲೀಸರು, ಅಗ್ನಿಶಾಮಕ ದಳದವರು ಹಾಗೂ ರಾಫ್ಟಿಂಗ್ ತಂಡದವರು ಸ್ಥಳಕ್ಕೆ ಬಂದು ತಡರಾತ್ರಿವರೆಗೂ ಶೋಧ ಕಾರ್ಯ ನಡೆಸಿದ್ದಾರೆ. ಆದರೆ, ಮಹಿಳೆಯ ಬಗ್ಗೆ ಯಾವುದೇ ಸುಳಿವು ಕಂಡುಬಂದಿಲ್ಲ, ಶೋಧ ಕಾರ್ಯವನ್ನು ನಾಳೆಗೆ ಮುಂದುವರಿಸಲಾಗುವುದು ಎಂದು ಪೋಲಿಸರು ತಿಳಿಸಿದ್ದಾರೆ.