ಜಿಲ್ಲೆ

ಅಪಘಾತದಲ್ಲಿ ಗಾಯಾಳು ಮಹಿಳೆ ಸಾವು

ವಿಜಯವಾಣಿ ಸುದ್ದಿಜಾಲ ಧಾರವಾಡ

ತಾಲೂಕಿನ ಕ್ಯಾರಕೊಪ್ಪ ಬಳಿ ಸಂಭವಿಸಿದ್ದ ಕ್ರೂಸರ್ ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಸೋಮವಾರ ಮೃತಪಟ್ಟಿದ್ದಾಳೆ. ನಗರದ ಹೊಸಯಲ್ಲಾಪುರ ನಿವಾಸಿ ಸರೋಜಾ ಮಹಾಂತೇಶ ಜಟ್ಟೆಣ್ಣವರ (48) ಮೃತ ಮಹಿಳೆ. ಫೆ. 8ರಂದು ಸಂಬ೦ಧಿಯೊಬ್ಬರ ಅಂತ್ಯಕ್ರಿಯೆಗೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ಪಲ್ಟಿಯಾಗಿತ್ತು. ಅಪಘಾತದಲ್ಲಿ ನಾಲ್ವರು ಮರಣ ಹೊಂದಿದ್ದರು. ಗಾಯಗೊಂಡು ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸರೋಜಾ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ. ಈ ಅಪಘಾತದಲ್ಲಿ ಮೃತರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.