ಜಿಲ್ಲೆ

ತವರುಮನೆ ಸೇರಿದ ಸನ್ಯಾಸಿ ಪತ್ನಿ

ಕೋಲಾರ: ದತ್ತಾತ್ರೇಯ ಅವಧೂತ ಸ್ವಾಮಿೂಂದಿಗೆ ಮನೆ ತೊರೆದು ಹೋಗಿ ಮದುವೆಯಾಗಿದ್ದ ಹೊಳಲಿ ಗ್ರಾಮದ ಯುವತಿ, ಪಾಲಕರು ಮತ್ತು ಗ್ರಾಮದ ಮುಖಂಡರ ಬುದ್ಧಿಮಾತಿಗೆ ಮಣಿದು ತವರು ಸೇರಿದ್ದಾಳೆ.

ಮುರುಡೇಶ್ವರದಲ್ಲಿದ್ದ ಸ್ವಾಮಿ ಮತ್ತು ಯುವತಿಯನ್ನು ಬುಧವಾರ (ಮಾ.4) ರಾತ್ರಿ ಪೊಲೀಸರು ಕೋಲಾರಕ್ಕೆ ಕರೆತಂದಿದ್ದರು. ಗ್ರಾಮದ ಮುಖಂಡ ಪ್ರಕಾಶ್ ಹಾಗೂ ಇತರರು ಗುರುವಾರ ಠಾಣೆಯಲ್ಲಿ ಆಕೆಗೆ ಬುದ್ಧಿ ಹೇಳಿ ಪಾಲಕರನ್ನು ಸೇರುವಂತೆ ಮಾಡಿದ್ದಾರೆ.

ಅವಳಿಗಾಗಿ ಸನ್ಯಾಸತ್ವ ತ್ಯಜಿಸಿದ್ದೇನೆೆ: ಮೋಸ ಮಾಡಿ ತಾಳಿ ಕಟ್ಟಿಲ್ಲ. ತಿರುಪತಿಯಲ್ಲಿ ವೆಂಕಟೇಶ್ವರಸ್ವಾಮಿ ಸನ್ನಿಧಿಯಲ್ಲಿ ತಾಳಿ ಕಟ್ಟಿ ಮದುವೆಯಾಗಿದ್ದೇನೆ. ನನ್ನ ಬಳಿ ಎಲ್ಲ ಸಾಕ್ಷಿಗಳಿವೆ. ನಾನೇನು ದೊಡ್ಡ ಅಪರಾಧ ಮಾಡಿಲ್ಲ. ಅವಳಿಗಾಗಿ ಸನ್ಯಾಸತ್ವ ತ್ಯಜಿಸಿದ್ದೇನೆ. ನನ್ನಿಂದ ದೂರ ಮಾಡಿರುವ ಆಕೆಯನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ. ಕಾನೂನು ಮೂಲಕ ನ್ಯಾಯ ಪಡೆಯುತ್ತೇನೆ ಎಂದು ಸ್ವಾಮಿ ಸಂಧಾನದ ವೇಳೆ ಹೇಳಿದ್ದಾನೆ.

ಟಿಕ್​ಟಾಕ್ ವಿಡಿಯೋ

ದತ್ತಾತ್ರೇಯ ಅವಧೂತ ಸ್ವಾಮಿ ಟಿಕ್​ಟಾಕ್​ನಲ್ಲಿ ಮಾಡಿರುವ ಎರಡು ವಿಡಿಯೋಗಳು ವೈರಲ್ ಆಗಿವೆ. ಇದರಲ್ಲಿ ಸ್ವಾಮಿ ಗಡ್ಡ ಬಿಟ್ಟುಕೊಂಡಿದ್ದಾನೆ. ನನಗೆ ನಾಟಕ ಮಾಡುವುದು ಇಷ್ಟವಿಲ್ಲ. ನಾಟಕ ಮಾಡುವವರನ್ನು ಕಂಡರೆ ಇಷ್ಟವಾಗಲ್ಲ. ನನಗೆ ಹೇಗೆ ಬೇಕೋ ಹಾಗೆ ಇದ್ದು ಅಭ್ಯಾಸ. ನಮ್ಮ ಕಾಲಿನ ಮೇಲೆ ನಿಂತುಕೊಳ್ಳಬೇಕು, ಸ್ವಂತ ದುಡಿಮೆಯಿಂದ ಬದುಕಬೇಕು, ಕಂಡವರ ಕಾಸಿಗೆ ಆಸೆ ಪಡಬಾರದು ಎಂದು ಉಪದೇಶ ಮಾಡಿದ್ದಾನೆ.