ಹಿರೇಕೆರೂರ: ಈ ದೇಶದಲ್ಲಿ ಬಸವಣ್ಣನ ನಂತರ ಅಸ್ಪೃಶ್ಯತೆ ಹೋಗಲಾಡಿಸಲು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಸತತವಾಗಿ ಪ್ರಯತ್ನಿಸಿದ್ದರ ಫಲವಾಗಿ ಇಂದು ಹಿಂದುಳಿದ ವರ್ಗದ ಜನತೆ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿದೆ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ತಾಲೂಕಿನ ಬಾಳಂಬೀಡ ಗ್ರಾಮದ ಗೃಹ ಕಚೇರಿಯಲ್ಲಿ ತಾಲೂಕು ಬಿಜೆಪಿ ವತಿಯಿಂದ ಸೋಮವಾರ ಏರ್ಪಡಿಸಿದ್ದ ‘ಭೀಮಸಂಗಮ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ವಿಶೇಷ ಮೀಸಲಾತಿಯ ಕುರಿತು ರೂಪಿಸದಿದ್ದರೆ ಇಂದು ಆ ಜನಾಂಗ ಬಹುಕಷ್ಟಕರ ರೀತಿಯಲ್ಲಿ ಜೀವನ ನಡೆಸುವುದನ್ನು ತಪ್ಪಿಸುವುದು ಹಾಗೂ ಸಮಾಜದಲ್ಲಿ ತುಳಿತಕ್ಕೊಳಗಾಗುವುದನ್ನು ನಿಯಂತ್ರಿಸಲು ಸಾಧ್ಯವಾಗುತ್ತಿರಲಿಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಜನಾಂಗ ಸೇರಿ ಅಲ್ಪಸಂಖ್ಯಾತರಿಗೆ ವಿಶೇಷ ಸ್ಥಾನಮಾನ ನೀಡಿದ್ದರಿಂದ ಇಂದು ಈ ಜನಾಂಗದ ಕುಟುಂಬಗಳು ನೆಮ್ಮದಿ ಜೀವನ ನಡೆಸುವಂತಾಗಿದೆ ಎಂದರು.
ತಾಲೂಕು ಬಿಜೆಪಿ ಮಂಡಲದ ಅಧ್ಯಕ್ಷ ಶಿವಕುಮಾರ ತಿಪ್ಪಶೆಟ್ಟಿ, ಪಪಂ ಸದಸ್ಯ ರಮೇಶ ತೋರಣಗಟ್ಟಿ, ರಾಜ್ಯ ಎಸ್.ಟಿ. ಮೋರ್ಚಾ ಕಾರ್ಯಕಾರಿಣಿ ಸದಸ್ಯ ಎನ್.ಎಂ. ಈಟೇರ್, ಎಸ್ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದುರ್ಗೆಶ ತಿರಕಪ್ಪನವರ, ಮುಖಂಡ ಬಿ.ಆರ್. ಪುಟ್ಟಣ್ಣನವರ ಮಾತನಾಡಿದರು.
ನಂತರ ದಲಿತ ಕುಟುಂಬಗಳ ಪರಿವಾರಗಳೊಂದಿಗೆ ಸಹ ಭೋಜನ ಕಾರ್ಯಕ್ರಮ ಮಾಡಲಾಯಿತು. ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯದರ್ಶಿ ಬಸಮ್ಮ ಅಬಲೂರ, ಲಿಂಗಾಚಾರಿ ಮಾಯಾಚಾರಿ, ಎಸ್.ಸಿ. ಮೋರ್ಚಾ ಅಧ್ಯಕ್ಷ ಮಂಜುನಾಥ ಚಲವಾದಿ, ಮುಖಂಡರಾದ ಚನ್ನೇಶ ದಿವಗಿಹಳ್ಳಿ, ಮನೋಹರ ವಡ್ಡಿನಕಟ್ಟಿ, ಜಗದೀಶ ದೊಡ್ಡಗೌಡ್ರ, ಸಿ.ಬಿ. ಮಾಳಗಿ, ಶಂಕರನಾಯಕ್ ಲಮಾಣಿ, ಹೊನ್ನಪ್ಪ ಸಾಲಿ, ಪ್ರಶಾಂತ ತಿರಕಪ್ಪನವರ, ಗೀತಾ ದಂಡಿಗಿಹಳ್ಳಿ, ಮಂಜುಳಾ ಬಾಳಿಕಾಯಿ, ಮಂಜುಳಾ ಮುತ್ತಗಿ, ವಿಶಾಲಾಕ್ಷಿ ಬಿಳಕಿ, ಸಂತೋಷ ಎಲ್ಲಾಪುರ, ರಾಜು ಬಟ್ಟಲಕಟ್ಟಿ, ದಲಿತ ಸಮಾಜದ ಮುಖಂಡರುಗಳು ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.