ಅಥಣಿ ಗ್ರಾಮೀಣ: ಕೊಕಟನೂರ ಹಾಗೂ ನಂದಗಾಂವ ಗ್ರಾಮದ ಸಂತೆಗೆ ತರಳಿ ತರಕಾರಿ ಖರೀದಿಸುವ ಅನಿವಾರ್ಯವಿತ್ತು. ಈಗ ಕಟಗೇರಿ ಗ್ರಾಮದಲ್ಲಿಯೇ ಸಂತೆ ಆರಂಭಿಸಿರುವುದರಿಂದ ಜನರಿಗೆ ಅನುಕೂಲವಾಗಿದೆ ಎಂದು ಗ್ರಾಪಂ ಅಧ್ಯಕ್ಷ ಗುರುಪಾದ ಸವದಿ ಹೇಳಿದರು.
ಅಥಣಿ ತಾಲೂಕಿನ ಕಟಗೇರಿ ಗ್ರಾಮದಲ್ಲಿ ಮಂಗಳವಾರ ಗ್ರಾಪಂ ವತಿಯಿಂದ ಪ್ರಾರಂಭಿಸಿರುವ ವಾರದ ಸಂತೆಗೆ ಚಾಲನೆ ನೀಡಿ ಮಾತನಾಡಿ, ಇಂದಿನಿಂದ ಪ್ರತಿ ಮಂಗಳವಾರ ವಾರದ ಸಂತೆ ನಡೆಯಲಿದೆ. ಸಂತೆ ನಡೆಸುವಂತೆ ಗ್ರಾಮಸ್ಥರ ಬೇಡಿಕೆಯಂತೆ 25 ಅಂಗಡಿಗಳನ್ನು ಪ್ರಾರಂಭಿಸಲಾಗಿದೆ. ಗ್ರಾಹಕರು ಅವಶ್ಯಕ ವಸ್ತುಗಳನ್ನು ಖರೀದಿಸಬೇಕೆಂದು ಮನವಿ ಮಾಡಿದರು.
ಗ್ರಾಪಂ ಉಪಾಧ್ಯಕ್ಷೆ ಸುನಂದಾ ಕಟಗೇರಿ, ಸದಸ್ಯರಾದ ಶಿವಪ್ಪ ಗಣಿ, ಬಸವರಾಜ ಸೊನ್ನದ, ಸಂಜೀವ ತಳವಾರ, ಮುರಗೇವ್ವ ಮಗದುಮ್ಮ, ಮಹಾದೇವಿ ಕಳ್ಳಿ, ಕಾಸವ್ವ ಗೋಳ, ಅಶೋಕ ಮಗದುಮ್ಮ, ಬಿ.ಬಿ.ಗಣಿ, ಸಾಗರ ಕಟಗೇರಿ, ಆಲಗೊಂಡ ಪಾಟೀಲ, ಪಿ.ಎಲ್.ಪೂಜಾರಿ, ಸಚಿನ ಹಿರೇಮಠ, ಸಿದ್ದಗೊಂಡ ಕಾಂಬಳೆ, ಪಿಡಿಒ ಬಿ.ಎಚ್.ಬಳೋಜಿ, ಎಲ್.ಬಿ. ಘಟನಟ್ಟಿ ಇತರರಿದ್ದರು.