ಜಿಲ್ಲೆ

ಮದುವೆಗೆ ತೆರಳುತ್ತಿದ್ದವರ ಖುಷಿ ಕಸಿದುಕೊಂಡ ಜವರಾಯ

ಅಪಘಾತದಲ್ಲಿ ನಾಲ್ವರು ಸಾವು| ಖಾಸಗಿ ಶಾಲಾ ವಾಹನ&ಬೈಕ್​ ನಡುವೆ ಅಪಘಾತ | ಬಾಲಕಿ ಸ್ಥಿತಿ ಗಂಭೀರ

ವಿಜಯವಾಣಿ ಸುದ್ದಿಜಾಲ ಚಿಂತಾಮಣಿ

ತಾಲೂಕಿನ ಅನುಪಲ್ಲಿ&ಬುರುಡುಗುಂಟೆ ಮಾರ್ಗಮಧ್ಯೆ ಖಾಸಗಿ ಶಾಲಾ ವಾಹನ ಮತ್ತು ಬೈಕ್​ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಥಳದಲ್ಲಿಯೇ ನಾಲ್ವರು ಮೃತಪಟ್ಟಿದ್ದು, ಮಗುವೊಂದು ತೀವ್ರವಾಗಿ ಗಾಯಗೊಂಡಿದೆ.

ತಾಲೂಕಿನ ಚಿಲಕಲನೇರ್ಪು ಗ್ರಾಮದ ನಿವಾಸಿ ಬಾಲಾಜಿ(30), ಅವರ ಮಾವ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ತಾಡಿಗೊಳ್ಳದ ಟಿ.ಎನ್​.ವೆಂಕಟೇಶಪ್ಪ (55) ಮತ್ತು ಬಾಲಾಜಿ ಮಕ್ಕಳಾದ ಹರೀಶ್​ (11) ಮತ್ತು ಆರ್ಯ (8) ಮೃತರು. ಶಿವಾನಿ (6)ಗೆ ತೀವ್ರಗಾಯವಾಗಿದ್ದು, ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರ ಆಸ್ಪತ್ರೆಗೆ ರವಾನಿಸಲಾಗಿದೆ.

ಚಿಲಕಲನೇರ್ಪು ಗ್ರಾಮದಿಂದ ಶಿಡ್ಲಟ್ಟ ತಾಲೂಕಿನ ತಲಕಾಯಲಬೆಟ್ಟಕ್ಕೆ ಮದುವೆಗೆಂದು ಗುರುವಾರ ಸಂಜೆ ಬೈಕ್​ನಲ್ಲಿ ಹೋಗುತ್ತಿದ್ದರು ಎನ್ನಲಾಗಿದೆ. ಅಪಘಾತದಲ್ಲಿ ಶಾಲಾ ವಾಹನದ ಮುಂಭಾಗ ಜಖಂಗೊಂಡರೆ, ಬೈಕ್​ ಎರಡು ಭಾಗವಾಗಿದೆ. ಚಿಂತಾಮಣಿ ತಾಲೂಕಿನ ಕೆಂಚಾರ್ಲಹಳ್ಳಿ ಠಾಣೆಯ ಪೊಲೀಸರು ಗಾಯಾಳು ಮತ್ತು ಮೃತ ದೇಹಗಳನ್ನು

ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ.