ಜಿಲ್ಲೆ

ಐದೇ ನಿಮಿಷದಲ್ಲಿ ನೆರವೇರಿತು ಮದುವೆ

Udupi

ಅಂಪಾರು: ಇಲ್ಲಿನ ಹಳ್ನಾಡು ಶ್ರೀ ಗಣಪತಿ ದೇವಸ್ಥಾನದಲ್ಲಿ ಗುರುವಾರ ಕೇವಲ ಐದೇ ನಿಮಿಷದಲ್ಲಿ ಮದುವೆ ನಡೆದಿದೆ.

ಅಂಪಾರು ಗುಡಿಬೆಟ್ಟು ನಿವಾಸಿ ಗಿರೀಶ್ ಹಾಗೂ ಅಚ್ಲಾಡಿಯ ಪ್ರೀತಿಕಾ ಸಿಂಪಲ್ಲಾಗಿ ಮದುವೆಯಾದ ಜೋಡಿ. ವರನ ಕಡೆಯಿಂದ ನಾಲ್ವರು ಹಾಗೂ ವಧುವಿನ ಕಡೆಯಿಂದ ನಾಲ್ವರು ಮತ್ತು ವಧು-ವರರಿಬ್ಬರು ಸೇರಿ 10 ಮಂದಿ ಮಾತ್ರ ಇದ್ದು, ಹೋಮಹವನ, ವಾದ್ಯ, ಪಟಾಕಿ, ಅದ್ದೂರಿ ಭೋಜನವಿಲ್ಲದೆ ಮದುವೆ ಮುಗಿದಿದೆ.

ಗುರುವಾರ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಸನ್ನಿಧಿಯ ಶ್ರೀ ಶಿವಪಾರ್ವತಿ ಕೃಪಾ ಸಭಾಭವನದಲ್ಲಿ ನಡೆಯಬೇಕಿದ್ದ ಇವರ ವಿವಾಹ ಲಾಕ್‌ಡೌನ್ ಹಿನ್ನೆಲೆಯಲ್ಲಿ ಹಳ್ನಾಡು ದೇವಳದಲ್ಲಿ ಸರಳವಾಗಿ ನಡೆಸಲಾಗಿದೆ. ಭಾನುವಾರ ನಡೆಯಬೇಕಾದ ಆರತಕ್ಷತೆ ರದ್ದುಪಡಿಸಲಾಗಿದೆ.