ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯ ಡಿಜಿಟಲ್​ ಟ್ಯಾಂಕ್​ನ ತಡೆಗೋಡೆ ಮಳೆಗೆ ಉರುಳಿ ಬಿದ್ದಿರುವುದು. 
ಜಿಲ್ಲೆ

ಉದ್ಘಾಟನೆಗೂ ಮುನ್ನವೇ ಬಿದ್ದ ಗೋಡೆ

ಕೋಲಾರ ಡೆಸ್ಕ್

₹10 ಕೋಟಿ ವೆಚ್ಚದಲ್ಲಿ ಆರ್​ಟಿಒ ನೂತನ ಕಚೇರಿ ನಿರ್ಮಾಣ

ಕೆಜಿಎಫ್​: ಇಡೀ ಜಿಲ್ಲೆಯಲ್ಲಿಯೇ ಪ್ರಪ್ರಥಮವಾಗಿ ಅತ್ಯಾಧುನಿಕ ಮಾದರಿಯ ಡಿಜಿಟಲ್​ ಟ್ರ್ಯಾಕ್​ನೊಂದಿಗೆ ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದ ಕೆಜಿಎಫ್​ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯ ಡಿಜಿಟಲ್​ ಟ್ರ್ಯಾಕ್​ನ ತಡೆಗೋಡೆ ಸೋಮವಾರ ರಾತ್ರಿ ಸುರಿದ ಮಳೆಗೆ ಕೊಚ್ಚಿ ಹೋಗಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಕೆಜಿಎಫ್​&ಬಂಗಾರಪೇಟೆ ಮುಖ್ಯ ರಸ್ತೆಯ ಬೆಮೆಲ್​ ಸ್ಪೋರ್ಟ್ಸ್​ ಕಾಂಪ್ಲೆಕ್ಸ್​ ಪಕ್ಕದಲ್ಲಿ ಸುಮಾರು 10 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಆರ್​ಟಿಒ ಕಚೇರಿ ಹಾಗೂ ಡಿಜಿಟಲ್​ ವಾಹನ ಚಾಲನಾ ಪಥದ ಕಾಮಗಾರಿ ಬಹುತೇಕ ಮುಗಿದಿದ್ದು, ಉದ್ಘಾಟನೆಗೂ ಮುನ್ನವೇ ಮಳೆಗೆ ತಡೆಗೋಡೆ ಕೊಚ್ಚಿ ಹೋಗಿರುವುದು ಕಾಮಗಾರಿಯ ಗುಣಮಟ್ಟದ ಬಗ್ಗೆ ಪ್ರಶ್ನಿಸುವಂತಾಗಿದೆ.

ಆರ್​ಟಿಒ ಕಚೇರಿ ಮುಂಭಾಗ ಕಳೆದ ಒಂದು ವರ್ಷದಿಂದ ಡಿಜಿಟಲ್​ ಟ್ರಾ$್ಯಕ್​ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಬಹುತೇಕ ಅಂತಿಮ ಹಂತಕ್ಕೆ ಬಂದಿದ್ದು, ಕೆಲವೇ ದಿನಗಳಲ್ಲಿ ಸಾರ್ವಜನಿಕರ ಸೇವೆಗೆ ಲಭ್ಯವಾಗುವ ಮಟ್ಟಕ್ಕೆ ತಲುಪಿತ್ತು. ಈಗ 70 ಮೀಟರ್​ ಉದ್ದದ ಡಿಜಿಟಲ್​ ಟ್ರಾ$್ಯಕ್​ನ ತಡೆಗೋಡೆ ಕೊಚ್ಚಿ ಹೋಗಿದೆ.

ಚಂದ್ರೇಗೌಡ ಎಂಬುವವರು ಡಿಜಿಟಲ್​ ಟ್ರಾ$್ಯಕ್​ ನಿರ್ಮಾಣದ ಗುತ್ತಿಗೆ ಪಡೆದು ನಿರ್ಮಾಣ ಕಾಮಗಾರಿ ನಡೆಸುತ್ತಿದ್ದರು. ತಡೆಗೋಡೆ ನಿರ್ಮಿಸಲು ತಳಪಾಯ ಹಾಕದೇ ನಿರ್ಮಾಣ ಮಾಡಿರುವುದರಿಂದಲೇ ಅವಾಂತರ ಸೃಷ್ಟಿಯಾಗಿದೆ ಎನ್ನಲಾಗಿದೆ.

ಈ ಹಿನ್ನಲೆಯಲ್ಲಿ ಕನ್ನಡಪರ ಸಂಟನೆಗಳು, ಸಂ&ಸಂಸ್ಥೆಗಳು ಕಳಪೆ ಕಾಮಗಾರಿ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿ, ಸಾರಿಗೆ ಇಲಾಖೆಯ ಇಂಜಿನಿಯರ್​ಗಳು ಕಾಮಗಾರಿ ನಡೆಯುವ ಸಂದರ್ಭದಲ್ಲಿ ಇಲ್ಲದೇ ಇರುವುದರಿಂದಲೇ ಕಾರ್ಮಿಕರು ಕಳಪೆ ಕಾಮಗಾರಿ ನಡೆಸಿದ್ದಾರೆ ಎಂಬ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ತಡೆಗೋಡೆ ಮಳೆಗೆ ಕೊಚ್ಚಿ ಹೋಗಿರುವ ಸುದ್ದಿ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಗುತ್ತಿಗೆದಾರ ಕೊಚ್ಚಿ ಹೋಗಿರುವ ತಡೆಗೋಡೆ ನಿರ್ಮಾಣಕ್ಕೆ ಮುಂದಾಗಿದ್ದು, ಪುನ@ ತಳಪಾಯ ಇಲ್ಲದೆ ಹಾಲೋ ಬ್ರಿಕ್ಸ್​ನಿಂದ ತಡೆಗೋಡೆ ನಿರ್ಮಾಣ ಮಾಡುತ್ತಿದ್ದಾರೆ. ಈಗಲಾದರೂ ಅಧಿಕಾರಿಗಳು ಕಾಮಗಾರಿ ಪರಿಶೀಲಿಸಿ ತಳಪಾಯ ಹಾಕಿ ತಡೆಗೋಡೆ ನಿರ್ಮಾಣ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸರ್ಕಾರಿ ಕೆಲಸಗಳ ಗುತ್ತಿಗೆ ಪಡೆದವರು ತಮ್ಮ ಸ್ವಂತ ಕೆಲಸದಂತೆ ಕಾಮಗಾರಿ ನಡೆಸಬೇಕು. ತಡೆಗೋಡೆಗೆ ತಳಪಾಯ ಇಲ್ಲದೆ ನಿರ್ಮಾಣ ಮಾಡಿರುವುದರಿಂದ ಉದ್ಘಾಟನೆಗೆ ಮುನ್ನವೇ ಕೊಚ್ಚಿ ಹೋಗಿದೆ. ಸಂಬಂದಪಟ್ಟ ಅಧಿಕಾರಿಗಳು ಸಿಮೆಂಟ್​ ಕೋರ್​ ಕಟ್​ ಮಾಡಿಸಿ ಕಾಮಗಾರಿಯ ಗುಣಮಟ್ಟ ಪರಿಶೀಲಿಸಬೇಕು ಎಂದು ನವಕರವೇ ರಾಜ್ಯಧ್ಯಕ್ಷ ಎಸ್​.ಎನ್​.ರಾಜಗೋಪಾಲಗೌಡ ಒತ್ತಾಯಿಸಿದ್ದಾರೆ.

ಉದ್ಘಾಟನೆಗೆ ಮುನ್ನವೇ ಒಂದೇ ಮಳೆಗೆ ತಡೆಗೋಡೆ ಕೊಚ್ಚಿ ಹೋಗಿರುವುದನ್ನು ನೋಡಿದರೆ ಕಚೇರಿಯ ಕಟ್ಟಡದ ಗುಣಮಟ್ಟದ ಬಗ್ಗೆ ಅನುಮಾನ ಮೂಡುತ್ತಿದೆ. ಕಾಮಗಾರಿ ನಡೆಯುವ ಸಂದರ್ಭದಲ್ಲಿ ಸಂಬಂದಪಟ್ಟ ಇಂಜಿನಿಯರ್​ಗಳು ಸ್ಥಳದಲ್ಲಿ ಹಾಜರಿದ್ದು, ಕಾಮಗಾರಿಯ ಮೇಲ್ವಿಚಾರಣೆ ನಡೆಸದೇ ಇರುವುದರಿಂದಲೇ ತಡೆಗೋಡೆ ಕೊಚ್ಚಿ ಹೋಗಿದ್ದು, ಸಂಬಂಧಪಟ್ಟವರು ಕೂಡಲೇ ಎಚ್ಚೆತ್ತುಕೊಳ್ಳಬೇಕು. - ಪಿ.ದಯಾನಂದ್​ ಜೆಡಿಎಸ್​ನ ತಾಲೂಕು ಅಧ್ಯಕ್ಷ ಧಾರಾಕಾರವಾಗಿ ಸುರಿದ ಒಂದೇ ಮಳೆಗೆ ಡಿಜಿಟಲ್​ ಟ್ರಾ$್ಯಕ್​ನ ಗೋಡೆ ಕುಸಿದಿದ್ದು, ಎರಡನೇ ಮಳೆಗೆ ಆರ್​ಟಿಒ ಕಚೇರಿ ಕಟ್ಟಡ ಕುಸಿಯಲಿದೆಯೇ ಎಂಬ ಅನುಮಾನ ಮೂಡುತ್ತಿದೆ. ಕಚೇರಿ ಕಟ್ಟಡದ ಗುಣಮಟ್ಟದ ಬಗ್ಗೆ ಥರ್ಡ್​ ಪಾರ್ಟಿ ತನಿಖೆಯಾಗಬೇಕಿದೆ. -ಎಸ್​.ರಾಜೇಂದ್ರನ್​ ಮಾಜಿ ಶಾಸಕ