ಜಿಲ್ಲೆ

ಸ್ವಾಭಿಮಾನದ ರಸ್ತೆ ನಿರ್ಮಿಸಿದ ಗ್ರಾಮಸ್ಥರು

ತಿಪಟೂರು: ರಸ್ತೆ ನಿರ್ಮಿಸಿ ಎಂದು ಕಾಡಿಬೇಡಿ ಸಾಕಾದ ಮತ್ತಿಹಳ್ಳಿ ಗ್ರಾಮಸ್ಥರು ಕೊನೆಗೆ ಸ್ವಂತ ಹಣದಿಂದಲೇ ಸ್ವಾಭಿಮಾನದ ರಸ್ತೆ ನಿರ್ಮಿಸಿಕೊಳ್ಳುವ ಮೂಲಕ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಪ್ರತ್ಯುತ್ತರ ನೀಡಿದ್ದಾರೆ.

ಮತ್ತಿಹಳ್ಳಿ ಕೆರೆ ಹಿಂಭಾಗದ ರಸ್ತೆಯಿಂದ ಚಿಕ್ಕಬಿದರೆ ಸಂಪರ್ಕಿಸುವ ರಸ್ತೆಯು ಸುಮಾರು 45-50 ವರ್ಷಗಳಿಂದಲೂ ಹಾಳಾಗಿದ್ದು, ಪಾದಚಾರಿಗಳೂ ಓಡಾಡಲಾಗದಷ್ಟು ಹದಗೆಟ್ಟಿತ್ತು. ಹೊಲ, ಗದ್ದೆ, ತೋಟಗಳಿಗೆ ಹೋಗಿ ಬರುವುದು ಅಸಾಧ್ಯವಾದ ಕಾರಣ ಗ್ರಾಮಸ್ಥರು ತಾಲೂಕು ಆಡಳಿತ, ಎಪಿಎಂಸಿ ಸಮಿತಿ, ಗ್ರಾಮ ಪಂಚಾಯಿತಿ ಹಾಗೂ ಶಾಸಕರ ಮೊರೆ ಹೋಗಿ ರಸ್ತೆ ಅಭಿವೃದ್ಧಿ ಮಾಡಿಸಿಕೊಡುವಂತೆ ಮನವಿ ಮಾಡಿದ್ದರು. ಆದರೆ ಯಾರೊಬ್ಬರೂ ಗಮನಹರಿಸದ ಕಾರಣ ಗ್ರಾಮಸ್ಥರೇ ಒಟ್ಟಾಗಿ ಸುಮಾರು ಒಂದು ಲಕ್ಷ ರೂಪಾಯಿ ದೇಣಿಗೆ ಸಂಗ್ರಹಿಸಿ, ಎಲ್ಲರೂ ಶ್ರಮದಾನ ಮಾಡುವ ಮೂಲಕ ಸುಮಾರು 1.5 ಕಿಮೀ ಉದ್ದದ ಚಿಕ್ಕಬಿದರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಪಡಿಸಿದ್ದಾರೆ.

ಸೋಮವಾರ ನಾಡದೇವತೆ ಶ್ರೀಬಿದರಾಂಬಿಕ, ಯಲ್ಲಮ್ಮ ಮತ್ತು ವೀರಭದ್ರಸ್ವಾಮಿ ಮೂರ್ತಿಗಳನ್ನು ಹೊಸ ರಸ್ತೆಯಲ್ಲಿ ಮೆರವಣಿಗೆ ಮಾಡಿ ವಿಶೇಷ ಪೂಜೆ, ಅಭಿಷೇಕ ಸಲ್ಲಿಸಿ ಸಿಹಿ ಹಂಚುವ ಮೂಲಕ ಗ್ರಾಮಸ್ಥರೇ ನೂತನ ರಸ್ತೆ ಉದ್ಘಾಟಿಸಿದರು.

ಸುಮಾರು ಬಾರಿ ವಿವಿಧ ಇಲಾಖೆಗಳು ಹಾಗೂ ಜನಪ್ರತಿನಿಧಿಗಳಿಗೆ ರಸ್ತೆ ಅಭಿವೃದ್ಧಿ ಮಾಡಲು ಅರ್ಜಿ ನೀಡಿದರೂ ಪ್ರಯೋಜನವಾಗದೇ ಇದ್ದಾಗ ಗ್ರಾಮಸ್ಥರೇ ಒಂದು ಲಕ್ಷ ರೂಪಾಯಿ ಸಂಗ್ರಹಿಸಿ ರಸ್ತೆ ಅಭಿವೃದ್ಧಿಪಡಿಸಿದ್ದೇವೆ. ಚಂದ್ರಶೇಖರ್ ರಸ್ತೆ ಕಾಮಗಾರಿ ನೇತೃತ್ವದ ಮುಂಖಂಡ ನಾನು ಅಧಿಕಾರ ವಹಿಸಿಕೊಂಡು ವರ್ಷವಾಗಿದ್ದು, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು ರಸ್ತೆ ದುರಸ್ಥಿಗೆ ಕೇಳಿಕೊಂಡಿದ್ದರು. ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ವಿಳಂಬವಾಗಿದೆ. ಗೋಪಿನಾಥ್ ಪಿಡಿಒ ಮತ್ತಿಹಳ್ಳಿ ಗ್ರಾಪಂ