ಬಸವನಬಾಗೇವಾಡಿ ತಾಲೂಕಿನ ಇವಣಗಿ ಗ್ರಾಮದ ಲಕ್ಕಮ್ಮದೇವಿ ದೇವಸ್ಥಾನದ ಆವರಣದಲ್ಲಿ ಕಸಾಪ 10ನೇ ತಾಲೂಕು ಸಾಹಿತ್ಯ ಸಮ್ಮೇಳನದ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಚಂದ್ರಶೇಖರ ಸುಭಾನಪ್ಪನವರ ಮಾತನಾಡಿದರು. ಹಾಸಿಂಪೀರ ವಾಲಿಕಾರ, ಬಸವರಾಜ ಕಳ್ಳಿಗುಡ್ಡ, ಶಿವಾನಂದ ಮಂಗಾನವರ, ವಿ.ಬಿ.ಮರ್ತೂರ ಇತರರಿದ್ದರು. 
ಜಿಲ್ಲೆ

ಕನ್ನಡಾಂಬೆ ತೇರು ಎಳೆಯಲು ಇವಣಗಿ ಗ್ರಾಮಸ್ಥರು ಸನ್ನದ್ಧ

ಬಸವನಬಾಗೇವಾಡಿ: 10ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿ ಹಾಗೂ ಅರ್ಥಪೂರ್ಣವಾಗಿಸಿ ಕನ್ನಡಾಂಬೆಯ ತೇರನ್ನು ಎಳೆಯಲು ಇವಣಗಿ ಗ್ರಾಮಸ್ಥರು ಸನ್ನದ್ಧರಾಗಿದ್ದಾರೆ ಎಂದು ಇವಣಗಿ ಗ್ರಾಮಸ್ಥ, ವಕೀಲ ಚಂದ್ರಶೇಖರ ಸುಭಾನಪ್ಪನವರ ಹೇಳಿದರು.
ತಾಲೂಕಿನ ಇವಣಗಿ ಗ್ರಾಮದ ಲಕ್ಕಮ್ಮದೇವಿ ದೇವಸ್ಥಾನದ ಆವರಣದಲ್ಲಿ ಕಸಾಪ 10ನೇ ತಾಲೂಕು ಸಾಹಿತ್ಯ ಸಮ್ಮೇಳನದ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಮುಂಬರುವ ನವೆಂಬರ್​ 13 ರಂದು ನಡೆಯುವ ಸಮ್ಮೇಳನದಲ್ಲಿ ಯಾವುದೇ ಕುಂದು&ಕೊರತೆ ಬರದ ಹಾಗೆ ಯಶಸ್ವಿಗೊಳಿಸುತ್ತೇವೆ. ಇಲ್ಲಿ ಎಲ್ಲ ಸಮುದಾಯಗಳ ಜನರಿದ್ದು, ಯಾವುದೇ ಭೇದ&ಭಾವ ಮಾಡದೆ ಕಾರ್ಯಕ್ರಮ ಮಾಡುತ್ತೇವೆ ಎಂದು ಹೇಳಿದರು.

ಕಸಾಪ ಜಿಲ್ಲಾಧ್ಯ ಹಾಸಿಂಪೀರ ವಾಲಿಕಾರ, ಬಸವರಾಜ ಕಳ್ಳಿಗುಡ್ಡ, ಕ.ರಾ.ಸ.ನೌ.ಸಂ ತಾಲೂಕಾಧ್ಯ ಶಿವಾನಂದ ಮಂಗಾನವರ, ವಿ.ಬಿ.ಮರ್ತೂರ, ಆರ್​.ಜಿ.ಅಳ್ಳಗಿ, ನಿಂಗಣ್ಣ ಬಾಗೇವಾಡಿ, ವಿವೇಕಾನಂದ ಕಲ್ಯಾಣಶೆಟ್ಟಿ, ದೇವೇಂದ್ರ ಗೋನಾಳ, ಮಲ್ಲು ಶೇಬಗೊಂಡ, ಎಚ್​.ಬಿ.ಬಾರಿಕಾಯಿ, ಶಿವು ಮಡಿಕೇಶ್ವರ, ಕಸಾಪ ತಾಲೂಕಾಧ್ಯ ಶಿವಾನಂದ ಡೋಣೂರ, ಬಿ.ವಿ.ಚಕ್ರಮನಿ ಮಾತನಾಡಿದರು.

ಗ್ರಾಪಂ ಅಧ್ಯ ಸಂಗನಗೌಡ ಬಿರಾದಾರ, ಶಿವಯ್ಯ ಹಿರೇಮಠ, ಲಾಯಪ್ಪ ಮುತ್ಯಾ, ಎಸ್​.ಐ.ಬಿರಾದಾರ, ಪದಾಧಿಕಾರಿಗಳಾದ ಯಮನಪ್ಪ ಮಿಣಜಗಿ, ಕೋಟ್ರೇಶ ಹೆಗಡ್ಯಾಳ, ಬಸವರಾಜ ಮೇಟಿ, ಬಸವರಾಜ ಚಿಂಚೊಳ್ಳಿ, ಶರಣು ದಳವಾಯಿ, ಎಸ್​.ಕೆ.ಸೋಮನಕಟ್ಟಿ, ಸುಭಾಸ ಹಡಪದ, ಸಿದ್ದಪ್ಪ ಅವಜಿ, ಶ್ರೀಶೈಲ ಸಿರಗುಪ್ಪಿ, ರಮೇಶ ಕನಸೆ, ಶಾಂತಾ ಪಾಟೀಲ, ಪುಷ್ಪಾ ಕುಲಕರ್ಣಿ, ನಿರ್ಮಲ ಅಂಗಡಿ, ಚಂದ್ರು ಹದಿಮೂರ, ಸಿದ್ದು ಬಾಗೇವಾಡಿ, ಕಾಳಪ್ಪ ಬಡಿಗೇರ ಪ್ರಾರ್ಥಿಸಿದರು,