ಬೆಂಗಳೂರು: ಇಬ್ಬರು ಕಾರು ಚಾಲಕರ ನಡುವೆ ನಡೆದ ಜಗಳದ ವೇಳೆ ಚಾಲಕನೊಬ್ಬ ಕಾರಿನ ಬಾನೆಟ್ ಏರಿ ಕುಳಿತ್ತಿದ್ದು, ಮತ್ತೊಬ್ಬ ಕಾರು ಚಲಾಯಿಸಿರುವ ಘಟನೆ ಹೆಬ್ಬಾಳ ಮೇಲ್ಸೇತುವೆಯಲ್ಲಿ ನಡೆದಿದ್ದು ವಿಡಿಯೊ ವೈರಲ್ ಆಗಿದೆ.
ನ.೨೯ ರಂದು ಬೆಳಗ್ಗೆ ೯ ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಸಾರ್ವಜನಿಕರೊಬ್ಬರು ನಗರ ಸಂಚಾರ ಪೊಲೀಸರ ಎಕ್ಸ್ ಖಾತೆಯಲ್ಲಿ ಚಾಲಕರ ಜಗಳ ಕುರಿತು ವಿಡಿಯೊ ಶೇರ್ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಈ ಮಾಹಿತಿ ಆಧರಿಸಿ ಹೆಬ್ಬಾಳ ಸಂಚಾರ ಠಾಣೆ ಪೊಲೀಸರು ಇಬ್ಬರು ಕಾರು ಚಾಲಕರನ್ನು ಠಾಣೆಗೆ ಬರುವಂತೆ ಸೂಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಬ್ಬಾಳ ಮೇಲ್ಸೇತುವೆಯಲ್ಲಿ ಇನೋವಾ ಮತ್ತು ಇಟಿಯಸ್ ಕಾರು ಚಾಲಕ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿದೆ. ಈ ವೇಳೆ ಆಕ್ರೋಶಗೊಂಡ ಇಟಿಯಸ್ ಕಾರು ಚಾಲಕ ತನ್ನ ಕಾರಿನಿಂದ ಕೆಳಗೆ ಇಳಿದು ಇನೋವಾ ಕಾರಿನ ಬಾನೆಟ್ ಮೇಲೆ ಕುಳಿತು ಕೂಗಾಡಲು ಆರಂಭಿಸಿದ್ದಾನೆ. ಈ ವೇಳೆ ಕೋಪಗೊಂಡ ಇನೋವಾ ಕಾರು ಚಾಲಕ ಕಾರು ಸ್ಟಾರ್ಟ್ ಮಾಡಿಕೊಂಡು ಬಾನೆಟ್ ಮೇಲೆ ಇಟಿಯಸ್ ಕಾರು ಚಾಲಕ ಕುಳಿತ್ತಿದ್ದಾಗಲೇ ಸುಮಾರು ನೂರು ಮೀಟರ್ ಮುಂದಕ್ಕೆ ಕಾರು ಚಲಾಯಿಸಿದ್ದಾನೆ. ಈ ಚಾಲಕರ ಬೀದಿ ಜಗಳ ಕಾರೊಂದರ ಡ್ಯಾಶ್ ಬೋರ್ಡ್ ಕ್ಯಾಮರದಲ್ಲಿ