ಮುದ್ದೇಬಿಹಾಳ ಪಟ್ಟಣದ ವಿಬಿಸಿ ಪ್ರೌಢಶಾಲೆ ಕಾಂಪೌಂಡ್​ ಎದುರು ವಿದ್ಯಾನಗರಕ್ಕೆ ಹೋಗುವ ರಸ್ತೆಯಲ್ಲಿ ಡಿಎಸ್ಪಿ ಬಲ್ಲಪ್ಪ ನಂದಗಾಂವಿ ಅವರು ಟನಾ ಸ್ಥಳದ ಪಂಚನಾಮೆ ನಡೆಸಿದರು. ಪಿಎಸ್​ಐ ಸಂಜಯ್​ ತಿಪ್ಪರಡ್ಡಿ, ದೂರುದಾರರಾದ ರೇಣುಕಾ ನಾಯಕ, ಸಾದಾರರು ಇದ್ದಾರೆ.  
ಜಿಲ್ಲೆ

ಜಾತಿ ನಿಂದನೆ ಪ್ರಕರಣದ ಸ್ಥಳ ಮಹಜರು

ಮುದ್ದೇಬಿಹಾಳ: ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಸೇವಾ ಸಂದ ಅಧ್ಯೆ ನೀಲಮ್ಮ ಪಾಟೀಲ (ಬೋರಾವತ್​) ವಿರುದ್ಧ ಇಲ್ಲಿನ ಪೊಲೀಸ್​ ಠಾಣೆಯಲ್ಲಿ ದಾಖಲಾಗಿರುವ ಜಾತಿ ನಿಂದನೆ ಪ್ರಕರಣದ ಸ್ಥಳ ಮಹಜರು ತನಿಖೆಯನ್ನು ಬಸವನಬಾಗೇವಾಡಿ ಡಿಎಸ್ಪಿ ಬಲ್ಲಪ್ಪ ನಂದಗಾಂವಿ ಅವರು ಗುರುವಾರ ನಡೆಸಿ ಮಾಹಿತಿ ದಾಖಲಿಸಿಕೊಂಡರು.

ತಮ್ಮಿಂದ 1.30 ಲ ರೂ. ಹಣವನ್ನು ಕೈಗಡ ಪಡೆದುಕೊಂಡಿದ್ದ ಹಣ ಮರಳಿ ಕೇಳಿದರೆ ನೀಲಮ್ಮ ಅವರು ನನ್ನ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದಾರೆ ಎಂದು ಪಟ್ಟಣದ ಪಿಲೇಕೆಮ್ಮನಗರದ ನಿವಾಸಿ, ಅಂಗನವಾಡಿ ಕಾರ್ಯಕರ್ತೆ ರೇಣುಕಾ ಧನಶೆಟ್ಟಿ ನಾಯಕ ಅವರು ಕಳೆದ ಆ.18 ರಂದು ಮುದ್ದೇಬಿಹಾಳ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಠಾಣಾಧಿಕಾರಿ ಸಂಜಯ್​ ತಿಪ್ಪರಡ್ಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಕಾನೂನು ನಿಯಮದನ್ವಯ ಎಸ್ಸಿ, ಎಸ್ಟಿ ದೌರ್ಜನ್ಯ ಪ್ರಕರಣ, ಜಾತಿ ನಿಂದನೆ ಪ್ರಕರಣಗಳ ತನಿಖಾಧಿಕಾರಿ ಡಿಎಸ್ಪಿ ಆಗಿರುವುದರಿಂದ ಬಲ್ಲಪ್ಪ ಅವರು ಈ ಪಂಚನಾಮೆ ನಡೆಸಿದರು.

ತನ್ನ ಮೇಲೆ ದೌರ್ಜನ್ಯ ನಡೆದಿರುವ ವಿಬಿಸಿ ಪ್ರೌಢಶಾಲೆಯ ಮುಖ್ಯಗೇಟ್​ ಹತ್ತಿರದ ಸ್ಥಳವನ್ನು ರೇಣುಕಾ ಅವರು ಎ್​ಐಆರ್​ನಲ್ಲಿ ದಾಖಲಿಸಿದ್ದರಿಂದ ಅದೇ ಸ್ಥಳಕ್ಕೆ ಬಂದು ವಿವರ ಸಂಗ್ರಹಿಸಲಾಯಿತು. ಟನೆ ನಡೆದ ದಿನ ಕಳೆದ ಆಗಸ್ಟ್​ 6 ರಂದು ಸಾವಿತ್ರಿ ನಾಗರತ್ತಿ ಎನ್ನುವವರೊಂದಿಗೆ ಕೂಡಿಕೊಂಡು ಸಿಡಿಪಿಒ ಕಚೇರಿಗೆ ಹೋದಾಗ ಅಲ್ಲಿಗೆ ಬಂದಿದ್ದ ನೀಲಮ್ಮ ಅವರಿಗೆ ಹಣ ಕೊಡುವಂತೆ ಕೇಳಿದ್ದೆ.

ಸಂಜೆ ವಿಬಿಸಿ ಮೈದಾನದ ಹತ್ತಿರ ಬರ್ರಿ ಹಣ ಕೊಡ್ತೀನಿ ಅಂತ ನೀಲಮ್ಮ ಹೇಳಿದ್ದರು. ನಾನು ಅವರು ಹೇಳಿದ ಸಮಯಕ್ಕೆ ಅಲ್ಲಿಗೆ ಹೋದಾಗ ನನಗೆ ಅವಾಚ್ಯ ಪದಗಳಿಂದ ನಿಂದಿಸಿ, ಕಪಾಳಕ್ಕೆ ಹೊಡೆಯುವಾಗ ಮಹಿಬೂಬ ಗೊಳಸಂಗಿ, ಪ್ರಶಾಂತ ಕಾಳೆ, ಅಜರುದ್ದೀನ್​ ಮೂಲಿಮನಿ ಎನ್ನುವವರು ಬಂದು ನನ್ನನ್ನು ಬಿಡಿಸಿಕೊಂಡರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದರಿಂದ ಡಿಎಸಿ ಅವರು ಇವರನ್ನೂ ಕರೆಸಿ ವಿಚಾರಣೆ ನಡೆಸಿ ವಾಸ್ತವ ತಿಳಿದುಕೊಂಡರು.

ಇದಕ್ಕೂ ಮುನ್ನ ಪೊಲೀಸ್​ ಠಾಣೆಗೆ ಆಗಮಿಸಿದ್ದ ಡಿಎಸ್ಪಿ ಅವರನ್ನು ಭೇಟಿ ಮಾಡಲು ರೇಣುಕಾ ಅವರೊಂದಿಗೆ ಕೆಲವು ಅಂಗನವಾಡಿ ಕಾರ್ಯಕರ್ತೆಯರೂ ಆಗಮಿಸಿ ತನಿಖೆ ವಿಳಂಬದ ಕುರಿತು ಪ್ರಶ್ನೆ ಮಾಡಿದ್ದರು.

ಈ ಕುರಿತು ವಿಜಯವಾಣಿಗೆ ಪ್ರತಿಕ್ರಿಯಿಸಿರುವ ನೀಲಮ್ಮ ಬೋರಾವತ್​ ಅವರು ನನ್ನ ವಿರುದ್ಧ ದುರುದ್ದೇಶದಿಂದ ಪ್ರಕರಣ ದಾಖಲಿಸಲಾಗಿದೆ.

ಹಸೀಲ್ದಾರ್​ ಕಚೇರಿ ಎದುರು ರೇಣುಕಾ ಮತ್ತಿತರರು ನನ್ನ ವಿರುದ್ಧ ಪ್ರತಿಭಟನೆ ನಡೆಸಿದ್ದಾಗ ನಾನು ಅವರಿಗೆ ನೌಕರಿ ಮಾಡಿಸಿಕೊಡಲು 1.30 ಲ ರೂ. ಹಣ ಪಡೆದಿದ್ದೇನೆ ಎಂದು ಬಹಿರಂಗವಾಗಿ ಆರೋಪಿಸಿದ್ದರು. ಈಗ ದೂರಿನಲ್ಲಿ ಕೈಗಡ ಪಡೆದಿದ್ದೇನೆ ಎಂದು ತಿಳಿಸಿದ್ದಾರೆ. ಇದರಿಂದಲೇ ಏನು ಗೋಲ್​ಮಾಲ್​ ನಡೆಯುತ್ತಿದೆ ಅನ್ನೋದು ಗೊತ್ತಾಗುತ್ತದೆ. ಇದನ್ನು ನಾನು ಕಾನೂನು ರೀತಿಯಲ್ಲೇ ಎದುರಿಸುತ್ತೇನೆ ಎಂದು ತಿಳಿಸಿದ್ದಾರೆ.