ಜಿಲ್ಲೆ

ದಿ. ವಾಸು ಅವರ ಕೊಡುಗೆ ಅನನ್ಯ

ಪ್ರಸಿನ್ ಕೆ.ಆರ್

ಹುಣಸೂರು: ಇತ್ತೀಚೆಗೆ ನಿಧನರಾದ ಹಿರಿಯ ರಾಜಕಾರಣಿ ವಾಸು ಅವರಿಗೆ ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನಗರದ ಬಿಜಿಎಸ್ ಸಮುದಾಯ ಭವನದಲ್ಲಿ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಸಂಘದ ತಾಲೂಕು ಅಧ್ಯಕ್ಷ ಕೆ.ಗಣೇಶ್‌ಗೌಡ, ಸಜ್ಜನ ರಾಜಕಾರಣಿ, ಮಿತಭಾಷಿಯಾಗಿದ್ದ ವಾಸು ಒಕ್ಕಲಿಗ ಸಮುದಾಯಕ್ಕೆ ಮಾತ್ರವಲ್ಲದೆ ಇಡೀ ಸಮಾಜಕ್ಕೆ ತಮ್ಮದೇ ಆದ ಸೇವೆ ಮಾಡಿದ್ದಾರೆ.

ಜಕಾರಣದೊಂದಿಗೆ ಶಿಕ್ಷಣ, ಪತ್ರಿಕೋದ್ಯಮ ಅವರ ಜೀವನಶೈಲಿಯಾಗಿ ಹಾಸುಹೊಕ್ಕಿತ್ತು ಎಂದು ಸ್ಮರಿಸಿದರು.

ಸಭೆಯಲ್ಲಿ ಒಕ್ಕಲಿಗರ ಸಂಘದ ಸಂಸ್ಥಾಪಕ ನಿರ್ದೇಶಕ ಚಿಕ್ಕಹುಣಸೂರು ಗೋವಿಂದೇಗೌಡ, ನಾಗಮಂಗಲ ರಾಮಕೃಷ್ಣೇಗೌಡ, ಸುರೇಶ್, ರವೀಗೌಡ ಇದ್ದರು.