ಜಿಲ್ಲೆ

ಖಾಸಗಿ ಕಾರ್ಯಕ್ರಮಗಳಿಗೆ ಶಾಲಾ ವಾಹನ ಬಳಕೆ;ಕ್ರಮ ಕೈಗೊಳ್ಳುವಂತೆ ಕರವೇ ಹಾಗೂ ಚಾಲಕರ ಸಂಘ ಒತ್ತಾಯ

ಮಡಿಕೇರಿ: ಖಾಸಗಿ ಕಾರ್ಯಕ್ರಮಗಳಿಗೆ ಶಾಲಾ ವಾಹನ ಬಳಸುವುದನ್ನು ಖಂಡಿಸಿ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಮ್ಯಾಕ್ಸಿ ಕ್ಯಾಬ್ ಮಾಲೀಕರು ಹಾಗೂ ಚಾಲಕರ ಸಂಘ ವತಿಯಿಂದ ಸಾರಿಗೆ ಇಲಾಖೆಯ ಮೋಟಾರ್ ವಾಹನಗಳ ನಿರ್ದೇಶಕ ಶಿವಕುಮಾರ್‌ರವರಿಗೆ ಗುರುವಾರ ಮನವಿ ಸಲ್ಲಿಸಿದರು.


ಪ್ರಾದೇಶಿಕ ಸಾರಿಗೆ ಕಚೇರಿಗೆ ಭೇಟಿ ನೀಡಿದ್ದ ಪ್ರಮುಖರು, ಕೊಡಗು ಜಿಲ್ಲೆಯ ಕೆಲವು ಶಾಲಾ ಬಸ್‌ಗಳು ಮದುವೆ ಹಾಗೂ ಪ್ರವಾಸೋದ್ಯಮಕ್ಕೆ ಸಂಬಂಧಪಟ್ಟ ಇನ್ನಿತರ ಕಾರ್ಯಕ್ರಮಗಳಿಗೆ ಹೊರ ಗುತ್ತಿಗೆ ಆದರದಲ್ಲಿ ಬಾಡಿಗೆ ರೂಪದಲ್ಲಿ ಬಳಸುತ್ತಿದ್ದಾರೆ. ಸ್ಥಳೀಯ ಪ್ರವಾಸಿ ಚಾಲಕರು ಹಾಗೂ ಮಾಲೀಕರಿಗೆ ಶಾಲಾ ವಾಹನಗಳು ಬಾಡಿಗೆ ಹೋಗುತ್ತಿರುವ ಪರಿಣಾಮ ಪ್ರವಾಸಿ ವಾಹನ ಚಾಲಕರು ಮಾಲೀಕರ ವಾಹನಗಳಿಗೆ ಬಾಡಿಗೆ ಇಲ್ಲದೆ ನಷ್ಟದಲ್ಲಿದೆ. ತಮ್ಮ ವಾಹನಗಳಿಗೆ ತೆರಿಗೆ ಕಟ್ಟಲು ಕಷ್ಟವಾಗುತ್ತಿದೆ. ಮುಂದಿನ ದಿನಗಳಲ್ಲಿ ಬಾಡಿಗೆ ಮಾಡದಂತೆ ಆದೇಶ ಮಾಡಿ, ಅಂತಹ ವಾಹನಗಳಿಗೆ ದಂಡ ವಿಧಿಸಿ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಲಾಯಿತು.


ಈ ಸಂದರ್ಭದಲ್ಲಿ ಶಿವರಾಮೇಗೌಡರ ಕರ್ನಾಟಕ ಕ್ಷಣ ವೇದಿಕೆ ಅಧ್ಯಕ್ಷ ರವಿ ಗೌಡ, ಮ್ಯಾಕ್ಸಿ ಕ್ಯಾಬ್ ಮಾಲೀಕರು ಹಾಗೂ ಚಾಲಕರ ಸಂಘದ ಅಧ್ಯಕ್ಷ ಬಿ.ಆರ್.ದಿನೇಶ್, ಪ್ರಮುಖರಾದ ವಿನೋದ್, ರಾಜೇಶ್, ಸುಜಿತ್, ಶಿವಾಜಿ ಪುನೀತ್, ವಿಶ್ವಪೂಜಾರಿ ಇತರರು ಹಾಜರಿದ್ದರು.