ವಿಧಾನ ಪರಿಷತ್ ಮಾಜಿ ಸದಸ್ಯ ಆಯನೂರು ಮಂಜುನಾಥ  
ಜಿಲ್ಲೆ

ಮೇಲ್ಮನೆ ಈಗ ಬಿಲ್ಡರ್ಸ್ ಹೌಸ್: ಆಯನೂರು ವ್ಯಂಗ್ಯ

ಶಿವಮೊಗ್ಗ: ಹಿಂದೆಲ್ಲ ಮೇಲ್ಮನೆಯನ್ನು ಯಲ್ಡರ್ಸ್ ಹೌಸ್(ಹಿರಿಯರ ಛಾವಡಿ) ಆಗಿತ್ತು. ಆದರೆ ಇಂದು ಬಿಲ್ಡರ್ಸ್ ಹೌಸ್ ಆಗಿ ಬದಲಾಗಿದೆ. ಹಿರಿಯರ ಛಾವಡಿಯಲ್ಲಿ ಕೋಟ್ಯಾಧೀಶರು, ಉದ್ಯಮಿಗಳೇ ತುಂಬಿಕೊಳ್ಳುತ್ತಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಆಯನೂರು ಮಂಜುನಾಥ ವ್ಯಂಗ್ಯವಾಡಿದರು.

ನನ್ನ ಎದೆಯೊಳಗಿನ ಹೋರಾಟಗಾರ ಯಾವಾಗ ನಿಶಕ್ತನಾಗುತ್ತಾನೋ ಅಲ್ಲಿವರೆಗೂ ರಾಜಕೀಯದಲ್ಲಿ ಇರುತ್ತೇನೆ. ಸೋಲುಗಳನ್ನು ಸವಾಲಾಗಿ ಸ್ವೀಕರಿಸುತ್ತೇನೆ. ಸೋಲುಗಳಿಂದ ವಿಚಲಿತಗೊಳ್ಳುವುದಿಲ್ಲ ಎಂದರು.
ಚುನಾವಣೆಯಲ್ಲಿ ಸೋಲು, ಗೆಲುವಿನ ಪ್ರಶ್ನೆಯಲ್ಲ. ಆದರೆ ವ್ಯವಸ್ಥೆ ಕುಸಿಯಬಾರದು. ಮನಸ್ಸಿಗೆ ಸ್ವಲ್ಪ ಘಾಸಿಯಾದರೂ ಸೋಲಿಗೆ ನೋವಿಲ್ಲ. ನನ್ನ ನಿಲುವುಗಳಲ್ಲಿ ಎಂದೂ ಸೋಲು ಅನುಭವಿಸಿಲ್ಲ. ಆಯ್ಕೆಯಲ್ಲಿ ಸೋತಿರಬಹುದು. ನಾನೆಂದೂ ರಾಜಕೀಯ, ಮತಗಟ್ಟೆ ವ್ಯವಸ್ಥೆಯಲ್ಲಿ ಸೋತಿಲ್ಲ. ಪದವೀಧರರು ಸೇರಿ ಯಾರೂ ನನ್ನ ಸೋಲಿಗೆ ಹೊಣೆಗಾರರಲ್ಲ ಎಂದರು.