ಜಿಲ್ಲೆ

ದುರಸ್ತಿ ಕಾಣದ ನಲವಡಿ- ಚಾಕಲಬ್ಬಿ ರಸ್ತೆ

Gadag - Desk - Tippanna Avadoot

ಕುಂದಗೋಳ: ತಾಲೂಕಿನ ಚಾಕಲಬ್ಬಿ ಹಾಗೂ ಕೊಂಕಣ ಕುರಹಟ್ಟಿ ಮಾರ್ಗವಾಗಿ ನಲವಡಿ ಗ್ರಾಮಕ್ಕೆ ತೆರಳುವ ರಸ್ತೆ ಸಂಪೂರ್ಣ ಹಾಳಾಗಿದೆ.

ಸಂಶಿ, ಚಾಕಲಬ್ಬಿ, ಕೊಂಕಣ ಕುರಹಟ್ಟಿ ರೊಟ್ಟಿಗವಾಡ ಗ್ರಾಮಸ್ಥರಿಗೆ ಈ ರಸ್ತೆ ಹುಬ್ಬಳ್ಳಿ ಹಾಗೂ ಗದಗ ಪಟ್ಟಣಕ್ಕೆ ತೆರಳಲು ಮುಖ್ಯವಾಗಿದೆ.

ಆಳವಾದ ತಗ್ಗು- ಗುಂಡಿಗಳಿದ ಕೂಡಿದ ರಸ್ತೆ ಇದಾಗಿದೆ. ಅಪಘಾತ, ಗರ್ಭಿಣಿಯರಿಗೆ ಹೆರಿಗೆ ನೋವು ಕಾಣಿಸಿಕೊಂಡರೆ ಅವರನ್ನು ಆಸ್ಪತ್ರೆಗೆ ಸಾಗಿಸಲು ಬೇಕಾದ ಆಂಬುಲೆನ್ಸ್ ಓಡಾಡಲು ಬಾರದಂತೆ ರಸ್ತೆ ಹಾಳಾಗಿದೆ.

ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನಹರಿಸಿ ರಸ್ತೆ ದುರಸ್ತಿ ಮಾಡಬೇಕು ಎಂದು ಚಾಕಲಬ್ಬಿ ಗ್ರಾಮಸ್ಥರಾದ ಗುಳಪ್ಪ ಕಟಗಿ, ರಮೇಶ, ನಾಗಪ್ಪ, ಹನುಮಂತ, ಪರಶುರಾಮ ಇತರರು ಆಗ್ರಹಿಸಿದ್ದಾರೆ.