ತುಮರಿಕೊಪ್ಪ ಗ್ರಾಮದಲ್ಲಿ ಸಿಂಧೂರ ಲಕ್ಷ್ಮಣ ಜಯಂತಿ ಕಾರ್ಯಕ್ರಮ ನಡೆಯಿತು. ವಾಲ್ಮೀಕಿ ಯುವಪಡೆ ಜಿಲ್ಲಾ ಅಧ್ಯಕ್ಷ ಎಂ.ಮರಿಯಪ್ಪ ಗ್ವಾತಗಿ, ಗ್ರಾಪಂ ಸದಸ್ಯ ಮಹಾಂತೇಶ ಪೂಜಾರ, ಪ್ರಮುಖರಾದ ಮುಡಿಯಪ್ಪ ಗಾಣದಾಳ, ರಂಗಪ್ಪ ಗ್ವಾತಗಿ, ಬಸಪ್ಪ ನಸಗುನ್ನಿ, ಲೋಕಪ್ಪ ಅಡವಿಬಾವಿ, ಗುರುವಪ್ಪ ಶಲೂಡಿ, ದ್ಯಾಮಣ್ಣ ಲಂಡೂರಿ, ಯಮನೂರಗೌಡ ಪರಸಾಪೂರ, ಶರಣಪ್ಪ ಗಾಣದಾಳ, ಬಾಳನಗೌಡ ಗೌಡ್ರ, ಕರಿಯಪ್ಪ ನಸಗುನ್ನಿ ಇತರರಿದ್ದರು. 
ಜಿಲ್ಲೆ

ಅಪ್ರತಿಮ ಸ್ವಾತಂತ್ರ್ಯ ಸೇನಾನಿ ಸಿಂಧೂರ ಲಕ್ಷ್ಮಣ

ಹನುಮಸಾಗರ: ಯುವಕರು ಸಿಂಧೂರ ಲಕ್ಷ್ಮಣನಂತೆ ಧೈರ್ಯಶಾಲಿ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ವಾಲ್ಮೀಕಿ ಯುವಪಡೆ ಜಿಲ್ಲಾ ಅಧ್ಯಕ್ಷ ಎಂ.ಮರಿಯಪ್ಪ ಗ್ವಾತಗಿ ಹೇಳಿದರು.

ಸಮೀಪದ ತುಮರಿಕೊಪ್ಪ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಿಂಧೂರ ಲಕ್ಷ್ಮಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಿಂಧೂರ ಲಕ್ಷ್ಮಣ ಬ್ರಿಟಿಷರ ವಿರುದ್ಧ ಧೈರ್ಯದಿಂದ ಹೋರಾಡಿ ನಾಡಿನ ಪ್ರಜೆಗಳನ್ನು ರಕ್ಷಣೆ ಮಾಡಿದ್ದರು. ಬ್ರಿಟಿಷರು ಹಾಗೂ ಶ್ರೀಮಂತರ ಹಣವನ್ನು ಬಡವರಿಗೆ ಹಂಚಿ ಆಂಗ್ಲ ಸರ್ಕಾರಕ್ಕೆ ನಡುಕ ಹುಟ್ಟಿಸಿದ್ದರು. ಗುಂಪು ಕಟ್ಟಿಕೊಂಡು ಬ್ರಿಟಿಷರ ಅಧಿಕಾರಶಾಹಿ ಹಾಗೂ ಜಮೀನ್ದಾರರ ವಿರುದ್ಧ ಹೋರಾಟ ಮಾಡಿದ ಸಿಂಧೂರ ಲಕ್ಷ್ಮಣನ ಚರಿತ್ರೆ ಜಗತ್ತಿನಲ್ಲಿ ಸರ್ವಕಾಲಕ್ಕೂ ಅಜರಾಮರ. ತಾಯ್ನಡಿನ ವಿಮೋಚನೆಗಾಗಿ ಬ್ರಿಟಿಷರ ಗುಂಡೇಟಿಗೆ ಬಲಿಯಾದ ಅಪ್ರತಿಮ ಸ್ವಾತಂತ್ರ್ಯ ಸೇನಾನಿ ಲಕ್ಷ್ಮಣ ಎಂದರು.

ಪ್ರಮುಖರಾದ ಬಾಳಪ್ಪ ಚಿಕನಾಳ, ತಿಪ್ಪಣ್ಣ ಮಾಗಿ, ಶರಣಪ್ಪ ಕುರಟ್ಟಿ, ರಂಗಪ್ಪ ಗ್ವಾತಗಿ, ದ್ಯಾಮಣ್ಣ ತುಗ್ಗಲಡೋಣಿ, ಕಳಕಪ್ಪ ಹೊಸಮನಿ, ಕೆ.ಹನಮಪ್ಪ ಲಂಡೂರಿ, ದ್ಯಾಮಣ್ಣ ಮೂಗನೂರು, ರಮೇಶ ಪೂಜಾರ, ಕೃಷ್ಣಪ್ಪ ಬಲಕುಂದಿ, ಸುರೇಶ ಗ್ವಾತಗಿ, ಶರಣಪ್ಪ ಪೂಜಾರ ಇತರರಿದ್ದರು.