ಕದರೀಪುರ: ಕೋಲಾರ ತಾಲೂಕು ವೇಮಗಲ್ ಹೋಬಳಿಯ ಮದ್ದೇರಿಯಲ್ಲಿ ಬೀದಿ ನಾಯಿಗಳ ಹಾವಳಿ ಇನ್ನೂ ನಿಂತಿಲ್ಲ. ಎರಡು ದಿನದ ಹಿಂದೆಯಷ್ಟೇ ಮದ್ದೇರಿ ಗ್ರಾಮದ ಕುರಿಗಾಹಿಯೊಬ್ಬರ ಮೇಕೆ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ ಗಾಯಗೊಳಿಸಿದ್ದವು. ಅದು ಮಾಸೂವ ಮುನ್ನವೇ ಭಾನುವಾರ ಹಸುವಿನ ಕರುವಿಗೆ ಶ್ವಾನಗಳು ಗಂಭೀರ ಗಾಯಗೊಳಿಸಿವೆ.
ಈ ಬಗ್ಗೆ ಜ.4ರಂದು ವಿಜಯವಾಣಿಯಲ್ಲಿ "ಮದ್ದೇರಿ ವ್ಯಾಪ್ತಿಯಲ್ಲಿ ಮಿತಿ ಮೀರಿದ ನಾಯಿ ಹಾವಳಿ' ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು. ವರದಿಗೆ ಎಚ್ಚೆತ್ತುಕೊಳ್ಳದ ಗ್ರಾಪಂ ಮತ್ತು ಅಧಿಕಾರಿಗಳು ರ್ನಿಲಕ್ಷ್ಯ ವಹಿಸಿದ್ದು, ಈಗ ಮತ್ತೊಂದು ಹಸುವಿನ ಮೇಲೂ ದಾಳಿ ಮಾಡಿವೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಹೈನುಗಾರಿಕೆಯಲ್ಲಿ ತೊಡಗಿದ ರೈತರಿಗೆ ಹಸುವೇ ಜೀವನಾಧಾರವಾಗಿರುತ್ತದೆ. ಅಂತರದಲ್ಲಿ ನಾಯಿಗಳ ದಾಳಿಗೆ ಒಳಗಾದ ಕರುವಿನ ಒದ್ದಾಟ ನೋಡಲು ಆಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರ ತಡರಾತ್ರಿ ಮದ್ದೇರಿ ಡೇರಿ ಹಾಲು ಪರಿವೀಕ ಮಂಜುನಾಥ್ ಅವರಿಗೆ ಸೇರಿದ ಕರುವಿನ ಹೊಟ್ಟೆ ಮತ್ತು ತೊಡೆ ಭಾಗವನ್ನು ಬೀದಿ ನಾಯಿಗಳ ಗುಂಪು ತೀರ್ವ ಗಾಯಗೊಳಿಸಿವೆ. ಸೂಕ್ತ ಕ್ರಮವಹಿಸಿ ನಾಯಿ ದಾಳಿಗಳಿಂದ ರಣೆ ನೀಡಿ ಶ್ವಾನಗಳ ಹಾವಳಿ ತಪ್ಪಿಸಲು ಸಂಬಂಧಪಟ್ಟ ಗ್ರಾಮಪಂಚಾಯಿತಿ ಅಧಿಕಾರಿಗಳು ಮತ್ತು ಪಶು ಸಂಗೋಪನೆ ಇಲಾಖೆ ಜಂಟಿ ಕಾರ್ಯಾಚರಣೆಯಿಂದ ನಾಯಿಗಳ ಸಂತಾನ ಶಕ್ತಿ ಹರಣ ಚಿಕಿತ್ಸೆ ನೀಡಬೇಕಿದೆ. ಮೂಕ ಪ್ರಾಣಿಗಳಿಗೆ ತೊಂದರೆ ಮಾಡಿದರೆ ಕಾನೂನಾತ್ಮಕವಾಗಿ ಪ್ರಾಣಿ ಹಿಂಸೆ ಕಾಯ್ದೆಯಡಿ ದೂರು ದಾಖಲಿಸಿ ಪೊಲೀಸ್, ಕೋರ್ಟ್ ಎಂದು ಅಲೆದಾಡಿಸುವ ಅಧಿಕಾರಿ ವರ್ಗ ಅದೇ ನಾಯಿಗಳಿಂದ ಆಗುವ ಅನಾಹುತ ತಡೆಗಟ್ಟುವಲ್ಲಿ ಹಿಂದೆ ಉಳಿದಿರುವುದು ದುರಂತ, ಬೀದಿನಾಯಿಗಳಿಂದ ಆಗುತ್ತಿರುವ ಅನಾಹುತಗಳಿಗೆ ಯಾರು ಹೊಣೆ? ಎಂಬುದು ಸಾರ್ವಜನಿಕ ಪ್ರಶ್ನೆಯಾಗಿದೆ.
ಇತ್ತೀಚೆಗೆ ಗ್ರಾಮೀಣ ಪ್ರದೇಶಗಳಲ್ಲಿ ನಾಯಿಗಳ ಸಂತತಿ ಹೆಚ್ಚಾಗುತ್ತಿದ್ದು. ಕ್ರೂರಿ ಪ್ರಾಣಿಗಳಂತೆ ವರ್ತಿಸುತ್ತಿವೆ. ಒಂದು ಹೆಣ್ಣು ನಾಯಿ ಹಿಂದೆ 40 ರಿಂದ 50 ಗಂಡು ನಾಯಿಗಳು ದಂಡು ರಸ್ತೆಗಳಲ್ಲಿ ಹೊಲ ಗದ್ದೆಗಳಲ್ಲಿ ಗುಂಪುಗಳಾಗಿ ಬೀಡು ಬಿಟ್ಟು ರಸ್ತೆಗಳಲ್ಲಿ ಅಪಘಾತಗಳಿಗೆ ಕಾರಣವಾಗುತ್ತಿವೆ. ಮತ್ತೊಂಡೆ ಬೆಳೆಗಳನ್ನು ಕೆದರಿ ನಾಶ ಮಾಡುತ್ತಿವೆ. ಆದಷ್ಟು ಬೇಗ ಸಂಬಂಧ ಪಟ್ಟ ಅಧಿಕಾರಿಗಳು ಸ್ಮೂವಾಗಿ ಪರಿಗಣಿಸಿ ಬೀದಿ ನಾಯಿಗಳ ಹಾವಳಿ ತಪ್ಪಿಸಲು ಕ್ರಮ ಕೈಗೊಳ್ಳಬೇಕಿದೆ. - ಸಂಪಂಗಿರಾಮಯ್ಯ ಪ್ರಗತಿಪರ ರೈತ ಮದ್ದೇರಿ ಶನಿವಾರ ತಡರಾತ್ರಿ ಕರುವನ್ನು ಬೀದಿ ನಾಯಿಗಳು ದಾಳಿ ಮಾಡಿ ಹೊಟ್ಟೆ ಭಾಗದಲ್ಲಿ ಮತ್ತು ಕರಳು ಕಿತ್ತು ಬರುವ ಮಾದರಿಯಲ್ಲಿ ಕಚ್ಚಿ ಗಾಯಗೊಳಿಸಿವೆ. ನಾಯಿಗಳನ್ನು ಬೆದರಿಸಿ ಓಡಿಸಲು ಹೋದರೆ ನಮ್ಮ ಮೇಲೆಯೇ ಎರಗುತ್ತವೆ. ಹಗಲು&ರಾತ್ರಿ ಕಾವಲಿದ್ದರೂ ಸಾಧ್ಯವಾಗುತ್ತಿಲ್ಲ. ಬೀದಿ ನಾಯಿಗಳ ಕಾಟ ತಪ್ಪಿಸಲು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಮತ್ತು ಪಶು ಆಸ್ಪತ್ರೆ ಅಧಿಕಾರಿಗಳು ಕ್ರಮವಹಿಸಬೇಕು. - ಮಂಜುನಾಥ್ ಮದ್ದೇರಿ ಹಾಲು ಡೇರಿ ಪರಿವೀಕ