ಸಿಂದಗಿ : ವಿರಕ್ತಮಠದ ಪ್ರೇಮಮಯಿ ಲಿಂ. ಸಿದ್ಧಲಿಂಗ ಶ್ರೀಗಳು ಭಕ್ತರ ಭವರೋಗ ಕಳೆದು ಗಳಿಸಿದ ಅನನ್ಯ ಪ್ರೇಮ ಅವರ ಜೀವಂತಿಕೆಗೆ ಸಾಕ್ಷಿಯಾಗಿದೆ ಎಂದು ಸಾಂರಗಮಠದ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.
ವಿರಕ್ತಮಠದಲ್ಲಿ ಲಿಂ.ಸಿದ್ಧಲಿಂಗ ಮಹಾಸ್ವಾಮಿಗಳ ಪ್ರಥಮ ಪುಣ್ಯಸ್ಮರಣೆ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ನೂತನ ಗದ್ದುಗೆ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ತಮ್ಮ ಭಕ್ತರ ಮೇಲಿಟ್ಟ ಪ್ರೀತಿ, ವಿಶ್ವಾಸದ ಮೂಲಕ ಸಾರ್ಥಕ ಬದುಕು ನಡೆಸಿ ಶಿವನೊಡಗೂಡಿದ್ದಾರೆ. ಶ್ರೀಮಠದ ಸಂಪ್ರದಾಯ ಮುಂದುವರಿಸಿ ಶ್ರೀಗಳ ಹೆಸರು ಚಿರಸ್ಥಾಯಿಗೊಳಿಸಬೇಕು ಎಂದರು.
ಗಣ್ಯ ವರ್ತಕ ಅಶೋಕ ವಾರದ ಮಾತನಾಡಿ, ಶ್ರೀಗಳು ಇಲ್ಲಿಲ್ಲ ಎನ್ನುವ ಶೂನ್ಯಭಾವ ನಮ್ಮೆಲ್ಲರನ್ನೂ ಕಾಡುತ್ತಿಲ್ಲ. ಏಕೆಂದರೆ ಅವರು ಭಕ್ತರ ಮೇಲಿಟ್ಟ ಕಾಳಜಿಗೆ ಇಲ್ಲಿ ಸೇರಿದ ಜನರೇ ನಿದರ್ಶನ ಎಂದರು.
ವಿರಕ್ತಮಠದ ಶ್ರೀ ಬಸವಪ್ರಭು ದೇವರು, ದೇವರಹಿಪ್ಪರಗಿಯ ಪೂಜ್ಯ ಮಡಿವಾಳೇಶ್ವರ ಸ್ವಾಮೀಜಿ, ಶ್ರೀಶೈಲ ನಂದಿಕೋಲ, ಹಿರೇಮಠದ ಲಿಂಗಯ್ಯ ದೇವರು ಇದ್ದರು.
ನಗರದ ಗಣ್ಯವರ್ತಕ ಸಿದ್ದಪ್ಪ ಉಪ್ಪಿನ, ಶ್ರೀಕಾಂತ ಅಂಬಲಗಿ, ಸಿದ್ದು ಪಟ್ಟಣಶೆಟ್ಟಿ, ನಾನಾಗೌಡ ಬಿರಾದಾರ, ಭೀಮರಾಯ ಸುಣಗಾರ ಇತರರಿದ್ದರು.